
ಅಂಜನಾದ್ರಿ ;ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಗಲಾಟೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ಐತಿಹಾಸಿಕ ಪುಣ್ಯ ಕ್ಷೇತ್ರ ಆನೆಗುಂದಿಯ ಅಂಜನಾದ್ರಿ ಹಾಗೂ ಇತರ ಪ್ರವಾಸಿ ಸ್ಥಳಗಳಿಗೆ ಬಂದಿದ್ದ ಉತ್ತರ ಭಾರತದ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮಂಗಳವಾರ ರಾತ್ರಿ ಗಲಾಟೆ ಯಾಗಿದ್ದು ಗಂಗಾವತಿ ಪೋಲಿಸ್ ಠಾಣೆ ಮೆಟ್ಟಿಲೇರಿದ ಘಟನೆ ಮಂಗಳವಾರ ರಾತ್ರಿ ಜರುಗಿದೆ.
ಗಂಗಾವತಿ ತಾಲೂಕಿನ ಬಸವನ ದುರ್ಗಾ ಕ್ಯಾಂಪ ಬಳಿ ಈ ಘಟನೆ ಜರುಗಿದ್ದು ಸಣ್ಣ ಮಾತಿನಿಂದ ಪ್ರರಂಭವಾದ ಜಗಳ ಪೋಲಿಸ್ ಠಾಣೆ ವರೆಗು ಬಂದಿದೆ.ಉತ್ತರ ಭಾರತದ ಪ್ರವಾಸಿಗರು ನಾಲ್ಕು ಬಸ್ಗಳಲ್ಲಿ ಸಂಚಾರ ಮಾಡುತ್ತಿದ್ದ ಬಸ್ ಕೇಬಲ್ಗೆ ಬಡಿದು ತುಂಡಾಗಿದ್ದು ಗಲಾಟೆಗೆ ಮೂಲ ಕಾರಣ ಎಂದು ತಿಳಿದು ಬಂದಿದೆ.
ಕೇಬಲ್ ತುಂಡಾಗಿದ್ದರಿಂದ ಹಣ ಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ಸ್ಥಳೀಯರು ಬಸ್ಗಳಿಗೆ ಕಲ್ಲು ಎಸೆದಿದ್ದರಿಂದ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಕೆಲ ಪ್ರವಾಸಿಗರ ಮೇಲೆ ಹಲ್ಲೆಯೂ ಆಗಿದೆ ಎಂದು ಮೂಲಗಳು ತಿಳಿಸಿವೆ.
ವ ಚಿಕಿತ್ಸೆ – ಉತ್ತರ ಪ್ರದೇಶದಿಂದ ಆಗಮಿಸಿದ್ದ ಪ್ರವಾಸಿಗರಾದ ರಾಮಕುಮಾರ್ ಹಾಗೂ ಮೋನು ಎನ್ನುವವರ ಮೇಲೆ ಸ್ಥಳಿಯರು ಹಲ್ಲೆ ಮಾಡಿದ್ದು ತಲೆಗೆ ಗಾಯಗಳಾಗಿದ್ದು ಅವರಿಗೆ ಗಂಗಾವತಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿ ಎಂದು ತಿಳಿದು ಬಂದಿದೆ.
ಪ್ರವಾಸಿಗರು ಘಟನೆಯನ್ನು ಖಂಡಿಸಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಪ್ರವಾಸಿಗರು ನಮಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದ್ದಾರೆ.
ಪ್ರಕರಣ್ಣಕ್ಕೆ ಗಂಗಾವತಿ ಗ್ರಾಮೀಣ ಠಾಣೆ ಪೋಲಿಸರು ಕ್ರಮ ಏನೆಂದು ಮಾಹಿತಿ ಲಭ್ಯವಾಗಿಲ್ಲಾ.