
ಅಂತರರಾಷ್ಟ್ರೀಯ ಬಾಯಿ ಆರೋಗ್ಯ ದಿನ ಆಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,20- ನೂರು ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಬಾಯಿ ಆರೋಗ್ಯ ದಿನವನ್ನು ಆಚರಿಸಲಾಯಿತು.
ದಂತ ತಜ್ಞ ವೈದ್ಯ ಪವನ್ ವರ್ಮಾ ಅವರು ಮಾತನಾಡಿ ಚಿಕ್ಕ ವಯಸ್ಸಿನ ಮಕ್ಕಳು ಬೆರಳು ಚೀಪುವುದು ಉಗುರು ಕಡಿಯುವ ಅಭ್ಯಾಸ ಇರುತ್ತದೆ ಇದರಿಂದ ಬಾಯಿಗೆ ಅನೇಕ ತೊಂದರೆಗಳು ಆಗಬಹುದು ಅನೇಕ ಒತ್ತಡಗಳ ಕಾರಣದಿಂದಾಗಿ ಮಧುಮೇಹ ಅಥವಾ ರಕ್ತದ ಒತ್ತಡ ದಂತಹ ಕಾಯಿದೆಗಳು ಇರುತ್ತವೆ ಇಂತಹ ಕಾಯಿಲೆ ಇರುವವರು ಅತ್ಯಂತ ಜಾಗರೂಕರಾಗಿದ್ದು ಬಾಯಿಯ ಸ್ವಚ್ಛತೆ ಮತ್ತು ದಂತಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅವಶ್ಯಕತೆವಾಗಿದೆ ಅಲ್ಲದೆ ಗುಟ್ಕಾ ಮತ್ತು ತಂಬಾಕು ಜಗಿಯುವ ಅಭ್ಯಾಸ ಇದ್ದವರು ಕೂಡಲೇ ಅವುಗಳನ್ನು ಬಿಡಬೇಕು ಮತ್ತು ತಜ್ಞ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯರು ಜನಾಭಿಪ್ರಾಯ ಮುಖಂಡರು ಅಬ್ದುಲ್ ನಬಿ ನೇತ್ರಾಧಿಕಾರಿ ಸಂಧ್ಯ ವರಲಕ್ಷ್ಮಿ ಎನ್ ಸಿ ಡಿ ಕೌನ್ಸರ್ ಮಲ್ಲೇಶ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಸೇರಿದಂತೆ ಅನೇಕರು ಇದ್ದರು.