
ಅಂತರರಾಷ್ಟ್ರೀಯ ಭೂಮಿ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 25- ಭೂಮಿಯ ಸಂರಕ್ಷಣೆಯಲ್ಲಿ ಸಮಸ್ತ ಮಾನವ ಕುಲದ ಜವಾಬ್ದಾರಿ ಮಹತ್ತರವಾಗಿದೆ ಎಂದು ನ್ಯಾಯಾಲಯದ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಅಭಿಪ್ರಾಯ ಪಟ್ಟರು.
ಸಿರುಗುಪ್ಪ ನಗರದ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಭೂಮಿ ದಿನಾಚರಣೆ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಸಹಯೋಗದಲ್ಲಿ ಅವರು ಹಸಿರು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನಮಗೆ ಜೀವ ನೀಡಿದ ಹೆತ್ತ ತಾಯಿಯಾದರೆ ಜೀವನ ನೀಡುವುದು ಈ ಭೂಮಿ ತಾಯಿ ಭೂಮಿ ಹಾಗೂ ಭೂಮಿಯ ವಾತಾವರಣದಿಂದಲೇ ನಾವೆಲ್ಲ ಬದುಕಲು ಸಾಧ್ಯವಾಗಿದೆ ಪ್ರತಿ ವರ್ಷ ಏಪ್ರಿಲ್ 22ರಂದು ವಿಶ್ವಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಹಿರಿಯ ವಕೀಲ ಎನ್ ಅಬ್ದುಲ್ ಸಾಬ್ ರಾರಾವಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಭೂಮಿ ಎಂದರೆ ಕೇವಲ ಮಣ್ಣು ಮಾತ್ರವಲ್ಲದೆ ನದಿ ಪರ್ವತ ಸಮುದ್ರ ಅರಣ್ಯ ಅನಿಲ ಹಾಗೂ ಖನಿಜ ಸಂಪತ್ತಿನಿಂದ ಕೂಡಿದೆ ತನ್ನ ಸ್ವಾರ್ಥಕ್ಕಾಗಿ ಮಾನವನು ಸ್ವಯಂಕೃತ ಅಪರಾಧಕ್ಕೆ ಮುಂದಾಗಿದ್ದಾನೆ ಎಂದು ವಿವರಿಸಿ ಉಪನ್ಯಾಸ ನೀಡಿದರು.
ಸರ್ಕಾರಿ ಸಹಾಯಕ ಅಭಿಯೋಜಕ ಶಾರದಾ ತಾಲೂಕ ವಕೀಲರ ಸಂಘದ ಅಧ್ಯಕ್ಷ ಎಸ್ ಮಂಜುನಾಥ ಗೌಡ ಕಾರ್ಯದರ್ಶಿ ಹೆಚ್ ಪ್ಯಾಟೆಗೌಡ ವೆಂಕಟೇಶ್ ನಾಯಕ್ ಕೆ ಸಣ್ಣ ಹುಸೇನ್ ಹಿರಿಯ ವಕೀಲರಾದ ಪತ್ತಾರ್ ವೀರಣ್ಣ ಎಸ್ ಶ್ರೀನಿವಾಸ ಸಿದ್ದಲಿಂಗಯ್ಯ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಸಾರ್ವಜನಿಕರು ಇದ್ದರು