
ಅಕ್ರಮ ಮರುಳು ದಂದೆ ಮಾಫಿಯಾದೊಂದಿಗೆ ಅಧಿಕಾರಿಗಳ ಶಾಮಿಲು
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 27- ಹೋಬಳಿಯ ಡಾನಾಪುರ ಗ್ರಾಮದ ಸರ್ವೇ ನಂಬರ್.306ರ ಖಾಸಗಿ ಜಮೀನಿನಲ್ಲಿ ನಿಯಮ ಬಾಹಿರವಾಗಿ ಸುಮಾರು 60ಕ್ಕೂ ಹೆಚ್ಚು ಟ್ರ್ಯಾಕ್ಟರ್ ಲೋಡ್ ಮರಳು ಅಕ್ರಮವಾಗಿ ಶೇಖರಿಸಿಡಲಾಗಿದೆ ಇದರ ಕುರಿತು ಮಾಹಿತಿ ನೀಡಿದರೆ ಯಾವ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಧಿಕಾರಿಗಳಮೇಲೆ ದಂದೆಕೋರರೊಂದಿಗೆ ಶಾಮೀಲಾಗಿರುವ ಸಂಶಯ ವ್ಯಕ್ತವಾಗುತ್ತಿದೆ.
ಡಾನಾಪುರ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಳು ದಂದೆಯ ಬಗ್ಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೆ , ಹಾಗೂ ಪೊಲೀಸ್ ಇಲಾಖೆಗೂ ಖಚಿತ ಮಾಹಿತಿ ನೀಡಿದರೆ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳದೇ ಉಡಾಫೇ ಉತ್ತರಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಮರಳು ಮಾಫಿಯ ಎಗ್ಗಿಲ್ಲದೇ ನಡೆಯುತ್ತಿದ್ದು ಆಡಳಿತ ವರ್ಗ ಕಣ್ಮುಚ್ಚಿಕುಳಿತಿದೆ. ಅಕ್ರಮ ಮರಳು ಶೇಖರಣೆ ಅಥವಾ ಸಾಗಣೆ ಮಾಡುವುದರ ವಿರುದ್ಧ ಕಾನೂನುಗಳಿದ್ದು ಮತ್ತು ಸರ್ಕಾರ ಹಲವಾರು , ನಿಯಮಗಳು, ನಿಬಂದನೆಗಳು, ಸುತ್ತೋಲೆಗಳಿದ್ದರೂ ದಂದೆ ನಡೆಯುತ್ತಿದೆ .
ಈ ವಿಚಾರ ಗಮನಕ್ಕಿದ್ದರೂ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳು ಅವುಗಳನ್ನೆಲ್ಲಾ ಗಾಳಿಗೆ ತೂರಿ ದಂದೆಕೋರರೊಂದಿಗೆ ಕೈಜೋಡಿಸಿ ವ್ಯವಹಾರಿಸುತ್ತಿದ್ದಾರೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.
ಸುತ್ತಲೂ ಹಳ್ಳ, ಕೊಳ್ಳ, ತುಂಗಭದ್ರ ನದಿ ತೀರದಲ್ಲಿ ರಾತ್ರೋ ರಾತ್ರಿ ಅಕ್ರಮ ಮರಳು ಗಾಣಿಗರಿಕೆ ನಡೆಯುತ್ತಿದ್ದು ಸಂಭಂದ ಪಟ್ಟ ಅಧಿಕಾರಿಗಳು ಕ್ರಿಯಾಶೀಲರಾಗಿ ದಂದೆಯಲ್ಲಿ ಯಾರೇ ತೊಡಗಿದ್ದರೂ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಪತ್ರಿಕೆಗೆ ತಿಸಿದರು.