
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆ ಚುನಾವಣಾಯ ಸಭೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 1- ನಗರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಹಾನಗಲ್ಲ ಗುರು ಶ್ರೀ ಕುಮಾರೇಶ್ವರ ಭಾವಚಿತ್ರಕ್ಕೆ ವೇದಿಕೆಯ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಾರ್ಥನೆ ಬಳಿಕ ಸಭೆಯಲ್ಲಿ ಈ ಬಾರಿಯ ಅವಧಿಗೆ ಜಿಲ್ಲಾ ತಂಡವನ್ನು ಆಯ್ಕೆ ಮಾಡುವ ಬಗ್ಗೆ ತಾಲೂಕಿನ ಅನೇಕ ಹಿರಿಯರಿಂದ ಅನಿಸಿಕೆಗಳನ್ನು ಸಂಗ್ರಹ ಮಾಡಲಾಯಿತು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈಗಿನ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಇವರ ತಂಡವು ಅನೇಕ ಕೆಲಸಗಳನ್ನು ಸಮಾಜಕ್ಕಾಗಿ ಮಹಾಸಭಾದಿಂದ ಮಾಡಿದ್ದು ತೃಪ್ತಿ ತಂದಿದೆ. ಕೊರೋನಾ ಸಮಯದಲ್ಲಿ ಕೆಲಸಗಳಿಗೆ ತೊಂದರೆಯಾದರೂ ನಂತರದ ಅವಧಿಯಲ್ಲಿ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಮಹಾಸಭಾಕ್ಕೆ ಸೂಕ್ತ ನಿವೇಶನ ಕಂಡುಕೊಳ್ಳುವಲ್ಲಿ ಉತ್ತಮ ಕಾರ್ಯ ಮಾಡಿ ಇದೀಗ ನಿವೇಶನ ಪಡೆಯುವಲ್ಲಿ ಅಂತಿಮ ಘಟ್ಟದಲ್ಲಿ ಸರ್ಕಾರದ ಮಟ್ಟದಲ್ಲಿ ಕಡತ ಇರುತ್ತದೆ. ಅಲ್ಲದೆ ಪ್ರತಿಭಾ ಪುರಸ್ಕಾರಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಮಾಜ ಕಟ್ಟಿ ಬೆಳೆಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.
ಈ ತಿಂಗಳ 21ರಂದು ನಡೆಯುವ ಮಹಾಸಭಾ ಚುನಾವಣೆಗೆ ಇದೇ ತಂಡವನ್ನು ಬೆಂಬಲಿಸುವ ಅಭಿಪ್ರಾಯ ಸಭೆಯಲ್ಲಿ ಅನೇಕ ಮುಖಂಡರುಗಳಿಂದ ವ್ಯಕ್ತವಾಯಿತು. ಕಳೆದ 30 ವರ್ಷಗಳಿಂದ ಸಂಘ ಚಾಲನೆಯಲ್ಲಿದ್ದು ಮೂರು ವರ್ಷಗಳಿಂದ ಉತ್ತಮ ವೇಗ ಪಡೆದುಕೊಂಡಿದೆ ಈ ಬಾರಿಯ ಐದು ವರ್ಷಗಳ ಅವಧಿಗೆ ಜಿಲ್ಲಾಧ್ಯಕ್ಷರು ಮತ್ತು 31 ಜನ ಸದಸ್ಯರನ್ನು ಚುನಾವಣೆ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಬೇಕಾಗಿದೆ.
ಮುಂದೊಂದು ದಿನ ಮೀಸಲಾತಿಗಳಿಂದ ಸಮಾಜ ಅಧೋಗತಿಗೆ ಹೋಗಬಾರದು ಎಂದು 1819ರಲ್ಲಿ ಸಿದ್ದಲಿಂಗ ಶಿವಾಚಾರ್ಯರು ಮತ್ತು ಹಾನಗಲ್ಲ ಕುಮಾರಸ್ವಾಮಿಗಳು ವೀರಶೈವ ಸಮಾಜದ ಕಾಳಜಿ ಇಟ್ಟುಕೊಂಡು ಸಂಘ ಕಟ್ಟಿದರು. ಈಗ ಸಂಘವು ಸಾಂವಿಧಾನಿಕ ಮಾನ್ಯತೆ ಪಡೆದ ಮೇಲೆ ಚುನಾವಣೆ ಪ್ರಕ್ರಿಯೆ ಅನಿವಾರ್ಯವಾಗಿದೆ ಸಭೆಯಲ್ಲಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿ ಕೊಟ್ಟೂರು ಶ್ರೀಗಳ ಸಮ್ಮುಖದಲ್ಲಿ ನಮ್ಮ ಸಮಾಜದಲ್ಲಿಯೇ ಎರಡು ಗುಂಪುಗಳು ಬೇಡ ಹೊಂದಾಣಿಕೆ ಮಾಡಿಕೊಂಡು ಹೋಗೋಣ ಎಂದು ಮನವಿ ಮಾಡಿದ್ದೇವೆ ಎಲ್ಲಾ ಗುರು ಹಿರಿಯರ ಅಭಿಪ್ರಾಯದಂತೆ ಮುಂದುವರೆಯುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಚೆನ್ನಬಸವನಗೌಡ, ನಾಗಲಾಪುರ ಬಸವರಾಜಪ್ಪ ಧಣಿ, ತೆಕ್ಕೆಲಕೋಟೆಯ ಸಿದ್ದರಾಮ ಸ್ವಾಮಿ ಜ್ಞಾನಾನಂದ ಸ್ವಾಮಿ, ಆರ್ ಸಿ ಬಸವನಗೌಡ ಎಂ ಆರ್ ವೀರನಗೌಡ, ವುಂತಗಲ್ ಅಮರೇಶಪ್ಪ, ಶಿವರಾಮೇಗೌಡ, ಶಂಭುಲಿಂಗ ಸ್ವಾಮಿ ನಂದೀಶ್ ಸೇರಿದಂತೆ ಅನೇಕ ಪ್ರಮುಖರು ಭಾಗಿಯಾಗಿ ಚಾನಾಳ್ ಶೇಖರ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕರಿಗೌಡ, ವಕೀಲರಾದ ವೀರೇಶ ಗೌಡ, ಕೋರಿ ವಿರೂಪಾಕ್ಷಪ್ಪ, ಬಸವಲಿಂಗಪ್ಪ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತಂಡದವರ ಹೆಸರುಗಳು ಕೋರಿ ವಿರೂಪಾಕ್ಷಪ್ಪ ವಿವಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, B.ಕಟ್ಟೆಗೌಡ ಕಪ್ಪಗಲ್ ವೀರಶೈವ ಸಮಾಜ ಹಿರಿಯ ಮುಖಂಡರು ಬಳ್ಳಾರಿ, ಚಾನಾಳ್ ಶೇಖರ್ ಅಧ್ಯಕ್ಷರು
ಗಂಗಾವತಿ, ವೀರೇಶ್ ಪ್ರಧಾನ ಕಾರ್ಯದರ್ಶಿ, ಶಿವಕುಮಾರ್ ಸ್ವಾಮಿ ಕೋಟೆಕಲ್ ಮಠ ಕಾರ್ಯದರ್ಶಿಗಳು, ಮೇಟಿ ದಿವಾಕರ್ ಗೌಡ ವುಂತಗಲ್, ನಂದೀಶ್ ಗೋನಾಳ್, ನಾಗಭೂಷಣ ಗೌಡ ನಾಡಗೌಡ, ಚಂದ್ರಮೋಹನ, ಕೆ ಪಿ ಪುಟ್ಟಸ್ವಾಮಿ, ಕೆ ಪಿ ಚನ್ನಬಸವರಾಜ, ಟಿ ಎಂ ಕಿರಣ್ ಕುಮಾರ್ ಸ್ವಾಮಿ, B.K ಸುನಿಲ್ ಕುಮಾರ್, ಸುರೇಶ್ ಗೌಡ, ಉಪ್ಪಾರ್ ಹೊಸಳ್ಳಿ, ಕರೇಗೌಡ ಮತ್ತು ಅಶೋಕ್ ಗೌಡ ಇದ್ದಾರೆ.