
ಅಗಸ್ಟ್ 24-25 ರಂದು ಕರ್ನಾಟಕ ರಾಜ್ಯ SSF ಕ್ಯಾಂಪಸ್ ಕಾನ್ಫರೆನ್ಸ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 7- ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ನಿಂದ ಮೈಸೂರಿನಲ್ಲಿ ಅಗಸ್ಟ್ 24-25 ರಂದು ಕ್ಯಾಂಪಸ್ ಕಾನ್ಫರೆನ್ಸ್ ನಡೆಯಲಿದೆ ಎಂದು SSF ರಾಜ್ಯಾಧ್ಯಕ್ಷರಾದ ಹಾಫಿಜ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಹೇಳಿದರು.
ರವಿವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಬಹಳಷ್ಟು ವಿದ್ಯಾರ್ಥಿಗಳ ಬದುಕನ್ನು ಮಾದಕ ವಸ್ತುಗಳು ಹಾಳು ಮಾಡುತ್ತಿವೆ. ನಮ್ಮ ಕ್ಯಾಂಪಸ್ ಭೇಟಿ ಸಂದರ್ಭದಲ್ಲಿ ಮಾದಕ ವ್ಯಸನಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ಮುಕ್ತವಾಗಿರುವ ಪ್ರತಿಜ್ಞೆ ಮಾಡಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವ್ಯಸನ ಮುಕ್ತ ಬದುಕು ರೂಪಿಸಿ ಅವರನ್ನು ಸಮಾಜ ಮುಖಿಯನ್ನಾಗಿಸುವುದು ನಮ್ಮ ಗುರಿ.
ನಾವು ವಿದ್ಯಾರ್ಥಿಗಳ ಪರ ಅನೇಕ ಪ್ರತಿಭಟನೆ ಮಾಡಿದ್ದೇವೆ. ಅವನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಿದ್ದೇವೆ. ಏಕೆಂದರೆ ನಮ್ಮ ಗುರಿ ಶಿಸ್ತುಬದ್ಧ ವಿದ್ಯಾರ್ಥಿ ಸಮೂಹ. ಮತಾಂಧತೆ ಧರ್ಮಾಂಧತೆ ನಮ್ಮಲ್ಲಿಲ್ಲ.
ರಾಷ್ಡ್ರದಲ್ಲಿ ನಮ್ಮ ವಿದ್ಯಾರ್ಥಿ ಸಂಘಟನೆಯಲ್ಲಿ 8 ಲಕ್ಷ ಸದಸ್ಯತ್ವ ಇದೆ. ಡ್ರಗ್ ವಿರುದ್ದ ವಾಕಥಾನ್ ಶೀಘ್ರ ಕೊಪ್ಪಳದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಕಾರ್ಯದರ್ಶಿ ಅನ್ವರ್ ಅಸ್ ಅದಿ ಹಾಸನ, ಅಶ್ರಫ್ ಸಖಾಫಿ ಹರಿಹರ, ಕ್ಯಾಂಪಸ್ ಕಾರ್ಯದರ್ಶಿ ಉಬೈದ್ ಮಂಗಳೂರು, ಮೀಡಿಯಾ ಕಾರ್ಯದರ್ಶಿ ಇರ್ಶಾದ್ ಹಾಜಿ ಬಂಟ್ವಾಳ, ಶರೀಫ್ ಚಿಕ್ಕಮಗಳೂರು, ಸಂಘಟನೆಯ ಜಿಲ್ಲಾ ಉಸ್ತುವಾರಿ ಸಲೀಂ ಅಳವಂಡಿ ಇದ್ದರು.