
GTTC ಅತಿಧಿ ಉಪನ್ಯಾಸಕರ(ತಾತ್ಕಾಲಿಕ) ಹುದ್ದೆಗೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ವಿಜಯನಗರ,26- ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (GTTC) ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದ್ದು, ಇಲ್ಲಿ ವಿವಿಧ ವಿಭಾಗದ ವಿಷಯಗಳನ್ನು ಬೋಧಿಸಲು ಅತಿಥಿ ಉಪನ್ಯಾಸಕರನ್ನು (ತಾತ್ಕಾಲಿಕವಾಗಿ) ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ವಿದ್ಯಾರ್ಹತೆ BE in Electronics & Communication Engineering ಹುದ್ದೆ ಸಂಖ್ಯೆ 2, 2 ವರ್ಷದ ಭೋಧನೆ ಅಥವಾ ಕೈಗಾರಿಕಾ ಅನುಭವ ಹೊಂದಿರಬೇಕು.BE in Electrical & Electronics Engineering ಹುದ್ದೆ ಸಂಖ್ಯೆ 2, 2 ವರ್ಷದ ಭೋಧನೆ ಅಥವಾ ಕೈಗಾರಿಕಾ ಅನುಭವ ಹೊಂದಿರಬೇಕು. M.Tech in Mechanical Engineering domain ಹುದ್ದೆ ಸಂಖ್ಯೆ 1, 3 ವರ್ಷದ ಭೋಧನೆ ಅಥವಾ ಕೈಗಾರಿಕಾ ಅನುಭವ ಹೊಂದಿರಬೇಕು.
M.Tech in Electronics & Communication Engineering domain ಹುದ್ದೆ ಸಂಖ್ಯೆ 1, 3 ವರ್ಷದ ಭೋಧನೆ ಅಥವಾ ಕೈಗಾರಿಕಾ ಅನುಭವ ಹೊಂದಿರಬೇಕು. M. Sc (Master of science) ಹುದ್ದೆ ಸಂಖ್ಯೆ 1, 3 ವರ್ಷದ ಭೋಧನಾ ಅನುಭವ ಹೊಂದಿರಬೇಕು. ಸಂದರ್ಶನದ ಜ.29ರಂದು ಮಧ್ಯಾಹ್ನ 02.00 ರೊಳಗೆ ಸಂದರ್ಶನವಿರುತ್ತದೆ.
ಈ ಮೇಲ್ ಐಡಿ gttcmmhalli@gmail.com ಗೆ ಸ್ವ-ವಿವರವುಳ್ಳ ಬಯೋಡಟಾವನ್ನು (ಅರ್ಜಿ) ಕಳುಹಿಸ ಬಹುದು. ಹೆಚ್ಚಿನ ಮಾಹಿತಿಗಾಗಿ 9845416198 ಸಂಪರ್ಕಿ ಸಿಬಹುದಾಗಿದೆ.