
ಸಿರುಗುಪ್ಪ: ಅನಧಿಕೃತ ಕ್ಲಿನಿಕ್ ಗಳ ಮೇಲೆ
ವೈದ್ಯಾಧಿಕಾರ ದಾಳಿ ಡಾ ಬಿ ಈರಣ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, ೨೧- ನಗರದಲ್ಲಿ ಅನಧಿಕೃತ ಕ್ಲಿನಿಕ್ ಗಳ ಮೇಲೆ ಜಿಲ್ಲಾ ಕೆ ಪಿ ಎಮ್ ಎಫ್ ಜಿಲ್ಲಾ ನೋಡಲ್ ಅಧಿಕಾರಿ ಡಾ ಪೂರ್ಣಿಮಾ ಕಟ್ಟಿಮನಿ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ಸೇರಿದಂತೆ ತಂಡವು ದಾಳಿ ನಡೆಸಿ ಅನಧಿಕೃತ ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದಾರೆ.
ಸರ್ಕಾರದ ಪರವಾನಿಗೆ ಇಲ್ಲದೆ ಕೆಲವು ವೈದ್ಯರು ಕ್ಲಿನಿಕ್ ಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಿರುಗುಪ್ಪ ನಗರದ ರಾಯಲ್ ಆಸ್ಪತ್ರೆ ಪಲ್ಲವಿ ಆಸ್ಪತ್ರೆ ಆರೋಗ್ಯ ಪಾಲಿ ಕ್ಲಿನಿಕ್ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು ಆಸ್ಪತ್ರೆಯನ್ನು ನಡೆಸಲು ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಪರವಾನಿಗೆ ಪಡೆದಿರುವುದಿಲ್ಲ ಆದ್ದರಿಂದ ಎಲ್ಲಾ ಆಸ್ಪತ್ರೆಗಳನ್ನು ಮುಚ್ಚಿ ಸೀಜ್ ಮಾಡಲಾಗಿದೆ .
ಎಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ನುರಿತ ವೈದ್ಯರಾಗಿದ್ದು ಯಾವುದೇ ಕ್ಲಿನಿಕ್ ನಲ್ಲಿ ನಕಲಿ ವೈದ್ಯರು ಸೇವೆ ಸಲ್ಲಿಸುತ್ತಿಲ್ಲ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ಕ್ಲಿನಿಕ್ ಗಳನ್ನು ನಡೆಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ ಪೂರ್ಣಿಮಾ ಕಟ್ಟಿಮನಿ ಅವರು ತಿಳಿಸಿದರು.