
ಅನಾಥ ಆಶ್ರಮಕ್ಕೆ ದೇಣಿಗೆ ನೀಡಿದ ವಿದ್ಯಾರ್ಥಿಗಳು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 24 ತಾಲೂಕಿನ ಗಾಣದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇಯ ತರಗತಿಯ ವಿದ್ಯಾರ್ಥಿಗಳು ಹೆಚ್ಚಿನ ಸಮಯ ವಿದ್ಯಾಬ್ಯಾಸ ಮಾಡುವದರ ಜೊತೆಗೆ ಸಾಮಾಜಿಕ ಕಾಳಜಿ ವಹಿಸುತಿದ್ದಾರೆ.
ಚಿತ್ರನಟ ದಿ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರೇರಣೆಯನ್ನು ಹೊಂದಿ ನಾವೂ ಕೂಡಾ ಸಾದ್ಯವಾದಷ್ಟು ಸಮಾಜ ಸೇವೆ ಮಾಡುವದರ ಜೊತೆಗೆ ನಮ್ಮ ಕೈಲಾದಷ್ಟು ಸಮಾಜಕ್ಕೆ ಕೊಡುಗೆ ನೀಡೋಣ ವೆಂದು ವಿದ್ಯಾರ್ಥಿಗಳ ಪಾಲಕರು ಮಕ್ಕಳ ದಿನ ನಿತ್ಯದ ಖರ್ಚಿಗೆಂದು ಕೊಟ್ಟಿರುವ ಹಣದಲ್ಲಿ ಸ್ವಲ್ಪ ಹಣವನ್ನು ಅನಾಥರ ಆಸರೆ ಮತ್ತು ನೊಂದವರ ಬೆಳಕು ಎಂಬ ಹೆಸರಿನಲ್ಲಿ ಹಣ ಸಂಗ್ರಹಿಸಿ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿರುವ ವಿಶ್ವ ಬಂದು ಶಿಕ್ಷಣ ಮತ್ತು ಸೇವಾ ಟ್ರಸ್ಟ್ ಗೆ ಸುಮಾರು 4000 ರೂಪಾಯಿ ಹಣವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಧನಂಜಯ, ಕಾರ್ಯದರ್ಶಿ ಜಯಶ್ರೀ, ಹಾಗೂ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಹನುಮೇಶ ಬೆಲ್ಲದ, ಸಹ ಶಿಕ್ಷಕರುಗಳಾದ ಮಹೇಶ ಮರಾಠಿ ,ಈರಮ್ಮ ಬಡಿಗೇರ, ಪದ್ಮಾವತಿ.ಶಿವಕುಮಾರ ಅವಸಂಗರದ, ನಾಗರಾಜ ಶೆಟ್ಟರ್, ರಮೇಶ ಜರಕುಂಟಿ ,ಭಾರ್ಗವ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.