WhatsApp Image 2024-06-25 at 4.44.19 PM

ಅಪಘಾತಗಳನ್ನು ತಡೆಯಲು ಸ್ಪೀಡ್ ಲೇಜರ್ ರಾಡರ್ ಗನ್

ಸಹಕಾರಿಯಾಗಲಿದೆ : ರಂಜೀತ್ ಕುಮಾರ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 25-  ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಅದರಲ್ಲೂ ಮುಖ್ಯವಾಗಿ ಯುವಕರು ಶೋಕಿಗಾಗಿ ತಮ್ಮ ದ್ವೀಚಕ್ರ ವಾಹನಗಳನ್ನು ಮತ್ತು ಕಾರ್ ಗಳನ್ನು ಅತೀವೇಗವಾಗಿ ಚಲಾಯಿಸಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುದು ಸೇರಿದಂತೆ ಎದುರಿನ ವಾಹನದ ಸವಾರರ ಪ್ರಾಣಕ್ಕೂಕುತ್ತು ತರುವಂತ ಘಟನೆಗಳು ಹೆಚ್ಚಾಗಿದ್ದು ಅತೀವೇಗದ ಚಾಲನೆಯಿಂದ ಸಾಕಷ್ಟು ಅಪಘಾತಗಳು ಸಂಭವಿಸಿ, ಹಲವಾರು ಜನ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ,.ಇಂತ ಅಪಘಾತಗಳನ್ನು ತಡೆಯಲಿಕ್ಕಾಗಿ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸ್ಪೀಡ್ ಲೇಜರ್ ರಾಡರ್ ಗನ್ ಗಳನ್ನು ಬಳಸಿ ಅಪಘಾತಗಳನ್ನು ತಡೆಯಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಹೇಳಿದರು.

ಅವರು ಇಂದು ನಗರದ ಜಿಲ್ಲಾ ಪೊಲೀಸ್ ಅಧಿಕಾರಿಗಳ ಕಛೇರಿ ಅವರಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಸಾಧನವು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ, ಇದರ ಸಹಾಯದಿಂದ ಸಂಚಾರಿ ನಿಯಮ ಉಲ್ಲಂಘನೆಯ ದಿನಾಂಕ, ಪ್ರಿಂಟ್ ದಿನಾಂಕ, ಆಕ್ಷಾಂಶ, ಲೊಕೇಶನ್ ಡೆಸಿಬಲ್ ಹಾಗೂ ವಾಹನದ ನೊಂದಣಿ ರೆಕಾರ್ಡ್ ಈ ಸಂಖ್ಯೆ ಸ್ವಯಂ ಸ್ವಯಂಚಾಲಿತವಾಗಿ ಮಾಡಿಕೊಳ್ಳುವ ಸಮರ್ಥ್ಯ ಈ ಸಾಧನ ಹೊಂದಿದೆ. ಈ ಉಪಕರಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ಎಲ್ಲಾ ತರಹದ ಪ್ರಕರಣ ದಾಖಲಿಸಬಹುದಾಗಿದೆ. ಈ ಉಪಕರಣವು ಪೊರ್ಟೆಬಲ್ ಆಗಿದ್ದು ಅಗತ್ಯವಿರುವ ರಸ್ತೆಗೆ ತೆಗೆದುಕೊಂಡು ಹೋಗಿ ಸರಳವಾಗಿ ಅಳವಡಿಸಬಹುದು.

ಇನ್ನು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ವ್ಯಕ್ತಿಯ ಭಾವಚಿತ್ರದ ಸಮೇತ ಮಾಹಿತಿ ದಾಖಲಿಸುವ ವಿಶಿಷ್ಟ ಟೆಕ್ನಾಲಜಿ ಈ ಉಪಕರಣದಲ್ಲಿದೆ. ರಾಜ್ಯದಲ್ಲಿ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ, ಇಂತ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಈ ಸಾಧನವನ್ನು ಬಳಸಿ ಮದ್ಯಪಾನ ಮಾಡಿದ ವ್ಯಕ್ತಿಯಿಂದ ವಾಹನವನ್ನು ಸೀಜ್ ಮಾಡಲಾಗುವುದು ಎಂದು ತಿಳಿಸಿದರು.

ಈ ಉಪಕರಣದಿಂದ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರು ಮತ್ತು ಸಂಬಂದಪಟ್ಟವರು ಅನಾವಶ್ಯಕವಾಗಿ ಪೋಲಿಸರೊಂದಿಗೆ ವಾಗ್ವಾದ ಮಾಡುವುದನ್ನು ತಪ್ಪಿಸಲು ಹಾಗೂ ಪೋಲಿಸ್ ಇಲಾಖೆಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಉತ್ತಮವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಈ ಸಾಧನ ನಮಗೆ ಉಪಯುಕ್ತವಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ, ಸಂಚಾರಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಅಯ್ಯನಗೌಡ “ಪಾಟೀಲ್ ಸೇರಿದಂತೆ ಇತರೆ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!