
ಅಭಿನವ ಗವಿಶ್ರೀಗಳಿಂದ ವಿಕಾಸ ಬ್ಯಾಂಕ್ 14 ನೇ ಶಾಖೆ ಕೊಪ್ಪಳದಲ್ಲಿ ಕಾರ್ಯಾರಂಭ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,18- ಹೊಸಪೇಟೆ ಮೂಲದ ವಿಕಾಸ ಸೌಹಾರ್ದ ಕೋ-ಆಪರೇವ್ ಬ್ಯಾಂಕ್ ನ 14ನೇ ಶಾಖೆಗೆ ಕೊಪ್ಪಳ ದಲ್ಲಿ ಗವಿಮಠದ ಅಭಿನವ ಗವಿದ್ದೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಚಾಲನೆಗೊಂಡಿತು.
ಸೋಮವಾರ ಬೆಳಿಗ್ಗೆ ಹೊಸಪೇಟೆ ರಸ್ತೆಯ ಗಂಜ್ ವೃತ್ತದ ಶರ್ಮಾ ಕಾಂಪ್ಲೆಕ್ಸ್ ನಲ್ಲಿ ವಿದ್ಯುಕ್ತವಾಗಿ ಶ್ರೀಗಳು ಕಾರ್ಯಾರಂಭಕ್ಕೆ ಮುಕ್ತಗೊಳಿಸಿದರು.
ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಮಾತನಾಡಿ ವರ್ಷದ 365ದಿನವೂ ನಿತಂತರ ಸೇವೆ ನೀಡುವ ಬ್ಯಾಂಕ್ ಕೊಪ್ಪಳ ನಗದಲ್ಲಿ ತನ್ನ 14ನೇ ಶಾಖೆಯನ್ನು ಆರಂಭಿಸಿದ್ದು ಗ್ರಾಹಕರು ಸೇವೆಯ ಲಾಭ ಪಡೆಯಲು ಆರ್ಶಿವದಿಸುವಂತೆ ಕೋರಿದರು ಸ್ಥಳೀಯರು ಹೆಚ್ಚು ಹೆಚ್ಚು ಲಾಭ ಪಡೆಯುವಂತೆ ಕೋರಿದರು.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ನಿರ್ದೇಶಕರಾದ ರಮೇಶ ಪುರೋಹಿತ, ಅಕ್ಕಿ ಮಲ್ಲಿಕಾರ್ಜುನ, ಎಂ.ವೆಂಕಪ್ಪ, ಸಿ.ಎಸ್.ಸೊಪ್ಪಿಮಠ, ರಾಜೇಶ ಹಿರೇಮಠ, ಜಿ.ದೊಡ್ಡಬೋರಯ್ಯ, ಗಂಗಾದರ ಪತ್ತಾರ, ಕೆ.ವಿಕಾಸ ಶಾಖಾ ವ್ಯವಸ್ಥಾಪಕ ಉದಯಕುಮಾರ ವಿಕಾಸ ಪರಿವಾರದ ಹಿರಿಯರಾದ ಕೆ.ದಿವಾಕರ, ಮಾಜಿ ನಿರ್ದೇಶಕರಾದ ಜೆ.ಜಂಬಣ್ಣ, ಮರಿಸ್ವಾಮಿ, ಅನಂತ ಜೋಶಿ, ವಿಠೋಬಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಉಳಿತಾಯ, ಚಾಲ್ತಿ, ಆವೃತ್ತಿತ ಠೇವಣಿ ಸೇರಿದಂತೆ ಮೊದಲ ದಿನವೇ ನೂರಕ್ಕೆ ಹೆಚ್ಚು ಖಾತೆಗಳು ಆರಂಭವಾಗಿದ್ದು ವಿಶೇಷವಾಗಿತ್ತು.