WhatsApp Image 2024-03-31 at 6.35.07 PM (1)

ನನ್ನ ಆರೋಗ್ಯ ನನ್ನ ಕೈಯಲ್ಲಿ ಉಚಿತ ಆರೋಗ್ಯ ಮಾಹಿತಿ ಶಿಬಿರ ಅಲ್ಪ ಖರ್ಚಿನಲ್ಲಿ ಅಗಾಧವಾದ ಆರೋಗ್ಯ ಪಡೆಯಿರಿ : ಡಾ.ಹನುಮಂತ ಮಳಲಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,31- ಹಿತ್ತಲಗಿಡ ಮದ್ದಲ್ಲ ಎನ್ನುವದನ್ನು ಎಲ್ಲರೂ ಕೇಳಿರಿರುತ್ತಾರೆ ಆದರೆ ಮದ್ದಲ್ಲದ ಹಿತ್ತಲ ಗಿಡವೇ ಇಲ್ಲ ಎನ್ನುವ ಅರಿವು ನಮಗಿಲ್ಲ. ಹಿತ್ತಲ ಗಿಡದಲ್ಲಿ ಬೆಳೆದ ಹಲವಾರು ಔಷಧಿ ಗುಣಗಳಿವೆ. ಮದ್ದು ಉಪಯೋಗಿಸಿದರೆ ಅಲ್ಪ ಖರ್ಚಿನಲ್ಲಿಯೇ ಅಗಾಧವಾದ ಆರೋಗ್ಯವನ್ನು ಪಡೆದುಕೊಳ್ಳಬಹುದು ಎಂದು ಪಾರಂಪರಿಕ ವೈದ್ಯ ಹಾಗೂ ನಿಸರ್ಗ ಚಿಕಿತ್ಸಕ ಡಾ.ಹನುಮಂತ ಮಳಲಿ ಹೇಳಿದರು.

ತಾಲ್ಲೂಕಿನ ದದೇಗಲ್ ಗ್ರಾಮದ ಎಸ್.ಎ.ನಿಂಗೋಜಿ‌ ಬಿ.ಇಡಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಎಸ್.ಎ.ನಿಂಗೋಜಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ರತ್ನಮ್ಮ ನಿಂಗೋಜಿ ಆಯುರ್ವೇದ ಆಸ್ಪತ್ರೆಯ ಆಶ್ರಯದಲ್ಲಿ ಆಯೋಜಿಸಿದ್ದ ‘ನನ್ನ ಆರೋಗ್ಯ ನನ್ನ ಕೈಯಲ್ಲಿ’ ಎನ್ನುವ ಉಚಿತ ಆರೋಗ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಳ ವಿಧಾನದಿಂದ ಆಯುರ್ವೇದ ಔಷಧದ ಮೂಲಕ ಅನೇಕ ಮಾರಕ ರೋಗಗಳನ್ನು ಗುಣಪಡಿಸಲಾಗಿದೆ. ಸುಮಾರು ಎರಡು ಲಕ್ಷ ಜನರು ಈಗಾಗಲೇ ಅಡ್ಡ ಪರಿಣಾಮವಿಲ್ಲದೇ ಗುಣಮುಖರಾಗಿದ್ದಾರೆ. ಗಿಡಮೂಲಿಕೆಗಳಿಂದ ತಯಾರಾದ ಔಷಧಗಳು ಸಂಜೀವಿನಿಯಾಗಿವೆ ಎಂದರು.

ರತ್ನಮ್ಮ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು.

ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ಎಸ್.ಎ.ನಿಂಗೋಜಿ, ಸಾಹಿತಿ ಡಾ.ಕೆ.ಬಿ.ಬ್ಯಾಳಿ, ಗೋಪಾಲರಾವ್ ಬಿನ್ನಾಳ, ಕಸಾಪ ಮಾಜಿ ಅಧ್ಯಕ್ಷ ಎಸ್.ಎ.ನಿಂಗೋಜಿ, ಸಂಗಣ್ಣ ಟೆಂಗಿನಕಾಯಿ ಇದ್ದರು.

ಬಿ.ರಾಘವೇಂದ್ರ ಅತಿಥಿಗಳನ್ನು ಪರಿಚಯಿಸಿದರು. ಮಲ್ಲನಗೌಡ ಮಾಸಗಟ್ಟಿ ಸ್ವಾಗತಿಸಿದರು. ವಿ.ವಿ.ಪತ್ತಾರ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!