
ಅಳವಂಡಿ ಹುಚ್ಚನಾಯಿ ದಾಳಿ; ಹಲವರಿಗೆ ಗಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಸಮೀಪದ ಅಳವಂಡಿ ಗ್ರಾಮದಲ್ಲಿ ಹುಚ್ಚು ನಾಯಿ ಮಹಿಳೆ, ವೃದ್ಧರು ಮತ್ತು ಮಕ್ಕಳು ಸೇರಿ ಹಲವರಿಗೆ ಕಚ್ಚಿ ಗಂಭೀರವಾಗಿ ದಾಳಿ ಮಾಡಿ ಗಾಯ ಗೋಳುಸಿದೆ.
ಹುಚ್ಚನಾಯಿ ಒಂದೇ ದಿನದಲ್ಲಿ 11 ಜನರಿಗೆ ಕಚ್ಚಿದ್ದು, ನಾಯಿಗೆ ಹುಚ್ಚು ಹಿಡಿದಿದೆ ಎನ್ನಲಾಗಿದೆ. ಇದರಿಂದ ಜನರು ಭಯ ಭೀತರಾಗಿದ್ದಾರೆ.
ನಾಯಿ ಮಗುಗೊಂದರ ಹಣೆ ಭಾಗ, ಮಹಿಳೆಯ ಕೈ, ವೃದ್ಧನ ಹಣೆ ಮತ್ತು ಕಣ್ಣಿನ ಭಾಗ, ಕಾಲು ಸೇರಿ ಇತರ ಭಾಗಗಳಿಗೆ ಕಚ್ಚಿದೆ. ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗ್ರಾ.ಪಂ ಮಾನವಿ ಃ ನಾಯಿ ಕುರಿತು ಗ್ರಾಮ ಪಂಚಾಯಿತಿ ಆಡಳಿತ ಮಕ್ಕಳು ಹಾಗೂ ಜನರು ಮನೆಯಿಂದ ಹೊರ ಬರಯವಾಗ ಎಚ್ಚರಿಕೆ ಯಿಂದ ಇರಯವಂತೆ ನಾಯಿಕಂಡಲ್ಲಿ ಪಂಚಾಯಿತಿಗೆ ತಿಳಿಸುವಂತೆ ಸಾಮಾಜಿಕ ಜಾಲ ತಾಣದ ಮೂಲಕ ಮಾನವಿ ಮಾಡಿದ್ದಾರೆ.