
ಇಂದಿನ ಬಜೆಟ್ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಸಂಸದ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,1- ಅಭಿವೃದ್ಧಿ ಪರ ಬಜೆಟ್ ಮಂಡಿಸಿ ದ ಪ್ರಧಾನಿ ಮೋದಿಜಿ ಹಾಗೂ ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. ಈ ಬಜೆಟ್ ನ್ನು ನಾನು ಸ್ವಾಗತಿಸುತ್ತೇನೆ ಎಂದು ಸಂಸದರು ಹೇಳಿದರು.
ಪ್ರತಿ ವಲಯದಲ್ಲೂ ಬಜೆಟ್ ಉತ್ತಮವಾಗಿದೆ, ಮತ್ತು ಸರ್ಕಾರವು ಈಗ ಬೆಳೆಯುತ್ತಿರುವ ಆರ್ಥಿಕತೆಯ ಬಲವನ್ನು ಗುರುತಿಸಿದೆ ಮತ್ತು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಅಥವಾ ಜೈ ಅನುಸಂಧಾನದ ಅಂಶಗಳ ಮೇಲೆ ಕೇಂದ್ರೀಕರಿಸಿದೆ, ಅಭಿವೃದ್ಧಿಶೀಲ ರಾಷ್ಟ್ರದಿಂದ 2027 ರ ಅಂತ್ಯದ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎನ್ನುವುದಕ್ಕೆ ಈ ಬಜೆಟ್ ಪೂರಕವಾಗಿದೆ. ಈ ಬಜೆಟ್ ಸಂಪೂರ್ಣವಾಗಿ GYAN ಎಂಬ ನಾಲ್ಕು ಅಕ್ಷರಗಳಿಗೆ ಮೀಸಲಾಗಿದೆ, ಅಂದರೆ (ಗರೀಬ್, ಯುವ, ಅನ್ನದಾತ ಮತ್ತು ನಾರಿ ಶಕ್ತಿ).