
ಕುಷ್ಟಗಿ ಇನ್ನರ್ ವೀಲ್ ಕ್ಲಬ್ ಅಧ್ಯೆಕ್ಷೆ ಶಾರದಾ ಶೆಟ್ಟರ್
ರಾಜ್ಯಮಟ್ಟದ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿಗೆ ಶಾರದಾ ಶೆಟ್ಟರ ಆಯ್ಕೆ
ಕುಷ್ಟಗಿ: ಪಟ್ಟಣದ ಇನ್ನರವೀಲ್ ಕ್ಲಬ್ ಅಧ್ಯಕ್ಷರಾದ ಶಾರದಾ ಶೆಟ್ಟರ ಅವರು ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಅನೇಕ ಸಮಾಜ ಸೇವೆಗಳನ್ನು ಮಾಡುತ್ತಿದ್ದು, ಇವರ ಸೇವೆಯನ್ನು ಗುರುತಿಸಿ ತಾಲೂಕಿನ ದೋಟಿಹಾಳ ಗ್ರಾಮದ ದಯಾನಂದಪುರಿ ಕ್ರೀಡೆ, ಸಾಂಸ್ಕೃತಿಕ ಜಾನಪದ ಕಲಾ ಸಂಘವು ರಾಜ್ಯಮಟ್ಟದ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ಇದೇ ಜೂ. 25ರಂದು ದೋಟಿಹಾಳದಲ್ಲಿ ನಡೆಯುವಂತಹ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಸಂಘದ ಜಂಟಿ ಕಾರ್ಯದರ್ಶಿ ಪೂರ್ಣಿಮಾ ದೇವಾಂಗಮಠ ಅವರು ತಿಳಿಸಿದ್ದಾರೆ.