IMG-20240122-WA0508

ಇನ್ನರ್ ವೀಲ್ ಕ್ಲಬ್ ವತಿಯಿಂದ ಶ್ರೀರಾಮನವಿಶೇಷ ಪೂಜೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,22- ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಸ್ವಾಮಿಯ ಪ್ರತಿಷ್ಠಾಪನ* ಮತ್ತು ಮಂದಿರದ ಪುನರಸ್ಥಾಪನ ಕಾರ್ಯಕ್ರಮದ ಪ್ರಯುಕ್ತ ಶ್ರೀರಾಮಚಂದ್ರ ದೇವರ ಫೋಟೋ ವನ್ನು ಅರಿಶಿನ ಕುಂಕುಮ ಹಚ್ಚಿ, ಹೂವಿನಹಾರಹಾಕಿ,,ಭಕ್ತಿಯಿoದ ಭಜನೆ ಮಾಡಿ ಭಕ್ತಿ ಗೀತೆಗಳನ್ನು ಹಾಡಿ ನಮ್ಮ ಇನ್ನೆರವೀಲ್ ಕ್ಲಬ್ ಕಚೇರಿ ಸಭಾಂಗಣದಲ್ಲಿ ಆರಾಧಿಸಿದೆವು ಎಂದು ಕೊಪ್ಪಳ ಇನ್ನರ್ವಿ ಕ್ಲಬ್ ಅಧ್ಯಕ್ಷರಾದ ವಿಜಯಲಕ್ಷ್ಮಿ ಹಂಚಾಟೆ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಸಾವಿತ್ರಿ ಮಜುದರ್ ರವರು ರಾಮ ಪ್ರಸಾದವನ್ನು ಹಾಗೂ ಶರಣಮ್ಮ ಪಾಟೀಲ್ ಅವರು ಪಾನಕ ವನ್ನು ದೇವರ ನೈವೇದ್ಯ ಕ್ಕೆ ಮಾಡಿಕೊಂಡು ಬಂದು ನೈವೇದ್ಯ ಮಾಡಿದರು. ಹಾಗೆ ಕಾರ್ಯಕ್ರಮದಲ್ಲಿ ರಾಮಾಯಣ ಕ್ಕೆ ಸಂಬಂದಿಸಿದ ಪಾತ್ರಗಳ ವೇಷಬೂಷನ ಸ್ಪರ್ಧೆ ಮಕ್ಕಳಿಗೆ ಏರ್ಪಡಿಸಲಾಗಿತ್ತು. ದೇವರ ನಾಮ, ಹಾಡುಗಳು, ಶ್ಲೋಕಗಳನ್ನು ಹೇಳುವ ಸ್ಪರ್ಧೆ ಏರ್ಪಡಿಸಿ ಇನ್ನೆರವೀಲ್ ಸದಸ್ಯರಿಗೆ,,,,ಬಹುಮಾನ ವಿತರಿಸಲಾಯಿತು. ಹಾಗೂ ಎಲ್ಲರೂ ಮಣ್ಣಿನ ಹಣತೆಯ ದೀಪಗಳನ್ನು ಹಚ್ಚಿ ಸಂಭ್ರಮಿಸಿದೆವು, ಹಾಗೆ ನಮ್ಮ ಕ್ಲಬ್ ವತಿಯಿಂದ 3 ವರ್ಷದಿಂದ ನಡೆದು ಕೊಂಡು ಬಂದಂಥ ಟೈಲರಿಂಗ್ ಟ್ರೇನಿಂಗ ಕ್ಲಾಸ್ ಉದ್ಘಾಟನೆ ಕೂಡ ಮಾಡ ಲಾಯಿತು..

ಕಾರ್ಯಕ್ರಮ ದಲ್ಲಿ ಕೊಪ್ಪಳ ಇನ್ನರ ವೀಲ್ ಕ್ಲಬ್ ಅಧ್ಯಕ್ಷರಾದ ವಿಜಯಲಕ್ಷ್ಮಿ ಹಂಚಾಟೆ ಹಾಗೂ ಉಪಾಧ್ಯಕ್ಷರಾದ ಉಮಾ ತಂಬ್ರಳ್ಳಿ ಖಜಾಂಚಿ ಅನಿತಾ ಬಜಾರಮಠ ಎಡಿಟರ್ ಮಮತಾ ಶೆಟ್ಟರ್ ಸುಧಾ ಶೆಟ್ಟರ್, ತ್ರಿಷಾಲಾ ಪಾಟೀಲ್,ಮಧು ಶೆಟ್ಟರ್,ಹೇಮಾ ಬಳ್ಳಾರಿ, ಜ್ಯೋತಿಮಟ್ಟಿ,ರಾಣಿ ಸೊರ ಟೂರು,ಮತ್ತು ಆಶಾ ಕವಲುರ, ಲತಾ ಉಲ್ಲತಿ,ನಾಗವೇಣಿ,ಅನುಷಾ ಲಕ್ಷ್ಮಿ ಪಾಟೀಲ್,ಶೋಭಾ ಹಮ್ಮಿಗಿ ಮತ್ತಿತರರು ಉಪಸ್ಥಿತರಿದ್ದ

Leave a Reply

Your email address will not be published. Required fields are marked *

error: Content is protected !!