
ಎನ್ಆರ್ಇಜಿ ಕೆಲಸ ನೀಡಿ : ಪಿಡಿಒ ಅವರ ಅಮಾನತ್ತು ಮಾಡಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 26- ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿದ ಗ್ರಾಮ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದಕ್ಕಿಂದ್ದAತೆ ಕೆರೆಯಲ್ಲಿ ನೀರು ತುಂಬಿದ ನೆಪವೊಡ್ಡಿ ಖಾತ್ರಿ ಕೆಲಸ ಸ್ಥಗಿತ ಗೊಳಿಡಿಸಿ ಕೂಲಿಕಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ದಲಿತ ವಿಮೋಚನಾ ಸೇನಾ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗು ಗ್ರಾಮ ಪಂಚಾಯಿತಿ ಸದಸ್ಯ ಹುಲುಗಪ್ಪ ಟಿ ಪುಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಎರಡು ದಿನಗಳ ಕಾಲ ಕೆಲಸ ನೀಡಿ ಸುಮಾರು ನೂರಾ ನಲವತ್ತು ಜಾಬ್ ಕಾರ್ಡ್ ಹೋಲ್ಡರ್ ಗೆ ಕೆಲಸ ಇಲ್ಲ ಕೆರೆಯಲ್ಲಿ ನೀರು ತುಂಬಿದೆ ಎಂದು ನೆಪ ಹೇಳಿ ಕೆಲಸಗಾರರಿಗೆ ಅನ್ಯಾಯ ಮಾಡಿದ್ದಾರೆ.
ಬರಗಾಲ ಒಂದೆಡೆಯಾದರೆ ಇನ್ನೊಂದೆಡೆ ತುಂಗಭದ್ರಾ ಜಲಾಶಯಕ್ಕೆ ನೀರಿಲ್ಲದೆ ಎರಡನೇ ಬೆಳೆ ಇಲ್ಲ ಹೀಗಾಗಿ ಜನರಿಗೆ ಕೃಷಿ ಕೆಲಸಗಳ ಇಲ್ಲವಾಗಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿ ಅಧಿಕಾರಿಗಳು ಕೂಡಲೆ ಕೆಲಸ ಕೊಡಬೇಕು.
ನಾವು ಇವರ ನಿಲುವನ್ನು ವಿರೋಧಿಸಿ ತಾಲೂಕಾ ಪಂಚಾಯಿತಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಕೂಡುತ್ತೇವೆ. ಪಿಡಿಒ ಅವರನ್ನು ಕೂಡಲೆ ಬದಲಾಯಿಸಬೇಕು ಅಯೋಧ್ಯೆಯ ಒಂದನೇ ವಾರ್ಡಿನ ಸದಸ್ಯನಾಗಿರುವ ನನಗೆ ಗೌರವ ಕೊಡುತ್ತಿಲ್ಲ, ಗ್ರಾಮದ ಯಾವುದೇ ಸಮಸ್ಯೆ ಬಗೆಗೆ ಹೇಳಿದರು ಕೇಳುತ್ತಿಲ್ಲಾ ರಾಜಕಾರಣಿಯಂತೆ ಪಿಡಿಒ ವರ್ತಿಸುತ್ತಿದ್ದಾರೆ ಕೂಡಲೆ ಅವರನ್ನು ಅಮಾನತ್ತುಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಎಸ್.ನಾಗರಾಜ್, ದಲಿತ ವಿಮೋಚನಾ ಸೇನಾ ಕಾರ್ಯದರ್ಶಿ ಶರಣಪ್ಪ ಅಂಗಜಲ್, ಕೂಲಿ ಕಾರ್ಮಿಕ ದಿನೇಶ್ ಉಪಸ್ಥೀತರಿದ್ದರು.