
ಎಲ್ಲರೂ ತಪ್ಪದೇ ಮತ ಚಲಾಯಿಸಿ : ಬಸಾಪಟ್ಟಣ ಪಿಡಿಓ ವಿದ್ಯಾವತಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 20- ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂರ್ಯನಾಯಕ ತಾಂಡಾ ಕೆರೆಯಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಸ್ವೀಪ್ ಕಾರ್ಯಕ್ರಮ ಹಾಗೂ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತರಿ ಅಭಿಯಾನ ಶುಕ್ರವಾರ ನಡೆಸಲಾಯಿತು.
ಗ್ರಾ.ಪಂ. ಪಿಡಿಓ ವಿದ್ಯಾವತಿ ಅವರು ಮಾತನಾಡಿ, ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗದೆ ಮತ ಚಲಾಯಿಸಬೇಕು ಎಂದರು.
ಕೂಲಿಕಾರರಿಗೆ ನರೇಗಾ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ನಂತರ ಕೂಲಿಕಾರರಿಗೆ ಮತದಾನದ ಮಹತ್ವ ಕುರಿತು ಪ್ರತಿಜ್ಣಾ ವಿಧಿ ಬೋಧಿಸಲಾಯಿತು. ಸ್ವೀಪ್ ಅಕ್ಷರ ಮಾಲೆ ಮೇಲೆ ಕೂಲಿಕಾರರು ಕುಳಿತಿರುವುದು ಎಲ್ಲರ ಗಮನಸೆಳೆಯಿತು.
ಈ ವೇಳೆ ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸಿಬ್ಬಂದಿಗಳಾದ ಶರಣಪ್ಪ, ಹುಲಗಪ್ಪ, ಬೆಟ್ಟಪ್ಪ ಸೇರಿ ಗ್ರಾಪಂ ಎಲ್ಲ ಸಿಬ್ಬಂದಿಗಳು, ವಿಆರ್ ಡಬ್ಲ್ಯು ಇದ್ದರು.