
ಎಲ್ಲರೂ ತಪ್ಪದೇ ಮತದಾನ ಮಾಡಿ : ಹರೀಶ್
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, 21- ಲೋಕಸಭಾ ಚುನಾವಣೆ ಮತದಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಮತದಾನ ಮಾಡಬೇಕೆಂದು, ಹೊಸಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಹರ್ ಹರೀಶ್ ಕರೆ ನೀಡಿದರು.
ತಾಲೂಕ ವ್ಯಾಪ್ತಿಯಲ್ಲಿ ಬರುವ ಹಂಪಿ, ಸೀತಾರಾಮ ತಾಂಡ ವ್ಯಾಪ್ತಿಯಲ್ಲಿ ಬರುವ ತಾಯಮ್ಮನ ಕೆರೆ ಹೊಳೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ದೇಶಕ್ಕೆ ಉತ್ತಮ ಆಡಳಿತ ಸರ್ಕಾರ ಬೇಕೆಂದರೆ ಪ್ರತಿಯೊಬ್ಬರು ಮತದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದರು. ಯಾವುದೇ ಕಾರಣಕ್ಕೂ ಮತದಾನಕ್ಕೆ ಹೊರಗೂಳಿಯಬಾರದು ಎಂದು ತಿಳಿ ಹೇಳಿದರು.
ಅಷ್ಟೇ ಅಲ್ಲದೆ ಕೂಲಿ ಕಾರ್ಮಿಕರು ಲೋಕಸಭಾ ಚುನಾವಣೆ ನೀತಿ ಸಮಿತಿ ಜಾರಿ ಮಾಡಿರುವ ನಿಯಮಗಳನ್ನು ಪಾಲಿಸಬೇಕೆಂದು, ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಇರುವ ಟಿ-ಶರ್ಟ್ ಟವೆಲ್ ಹಾಕಿಕೊಳ್ಳಬಾರದು ಎಂದು ಮತದಾನ ಪ್ರತಿಜ್ಞಾವಿಧಿಯನ್ನು ಅವರಿಗೆ ಬೋಧಿಸಿದರು.
ಅದೇ ರೀತಿಯಾಗಿ ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯಿತಿ ಟಿ ಐ ಈ ಸಿ ಕೋ ಆರ್ಡಿನೇಟರ್, ಹೆಚ್ ನಾಗರಾಜ್, ಮನ್ಸೂರ್ ಪಿಡಿಒ ಆನಂದಕುಮಾರ್ ಗಳ ಜೊತೆಗೆ ಸಿಬ್ಬಂದಿ ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು.