IMG-20231111-WA0008

 ಕೊಪ್ಪಳದ  ಎಸ್. ಎಫ್. ಎಸ್ ಐಸಿಎಸ್ಇ ಶಾಲೆ ಸೈಂಟಿಯಾ              ಡಿಸಲೈಟ್ಸ್ ಎಕ್ಸಪೋ ವಿಜ್ಞಾನ ವಸ್ತು ಪ್ರದರ್ಶನ 

ಶ್ರೇಷ್ಠ ವಿಜ್ಞಾನಿಗಳನ್ನು ಸೃಷ್ಟಿಸಬಲ್ಲವು – ದೇಶಪಾಂಡೆ

 ಕರುನಾಡ ಬೆಳಗು ಸುದ್ದಿ

ಕೊಪ್ಪಳ, 11-   ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಗಳು ಶ್ರೇಷ್ಠ ವಿಜ್ಞಾನಿಗಳನ್ನು ಸೃಷ್ಟಿಸಬಲ್ಲವು – ಅಭಿಷೇಕ ದೇಶಪಾಂಡೆ ಇಸ್ರೋ ವಿಜ್ಞಾನಿ ಹೇಳಿದರು.

ಅವರು ಎಸ್ಎಫ್ ಎಸ್ ಐಸಿಎಸ್ಇ ಶಾಲೆ ಕೊಪ್ಪಳದಲ್ಲಿ ಸೈಂಟಿಯಾ ಡಿಸಲೈಟ್ಸ್ ಎಕ್ಸಪೋ
ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ಮಟ್ಟದಲ್ಲಿ ಹಮ್ಮಿಕೊಳ್ಳುವ ಇಂಥಹ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಗಳು ಮಕ್ಕಳಲ್ಲಿನ ವೈಜ್ಞಾನಿಕ ಕೌಶಲ್ಯ ಮಟ್ಟವನ್ನು ಉತ್ಪಾದನೆ ಮಾಡುತ್ತವೆ.
ಅಷ್ಟೇ ಅಲ್ಲದೇ ಅದು ಮುಂದೆ ದೇಶಕ್ಕೆ ಕೊಡುಗೆಯಾಗಬಲ್ಲದು ಎಂದು ಇತ್ತೀಚೆಗೆ ಕೊಪ್ಪಳದ ಎಸ್. ಎಫ್. ಎಸ್ ಐಸಿಎಸ್ಇ ಶಾಲೆ ಯಲ್ಲಿ ಹಮ್ಮಿಕೊಂಡ ಸೈಂಟಿಯಾ ಡಿಸಲೈಟ್ಸ್ ಎಕ್ಸಪೋ 23 ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಇಸ್ರೋದ ವಿಜ್ಞಾನಿ ಅಭಿಷೇಕ ದೇಶಪಾಂಡೆಯವರು ಹೇಳಿದರು.

ಯಾವುದೇ ಮಕ್ಕಳ ಜ್ಞಾನದ ಮಟ್ಟವನ್ನು ಕಡೆಗಣಿಸಬಾರದು ಏಕೆಂದರೆ ಅವರು ಪಡೆದುಕೊಳ್ಳುವ ಜ್ಞಾನ ಮುಂದೊಂದು ದಿನ ಉತ್ತಮ ಬಲವಾದ ವ್ಯಕ್ತಿತ್ವವನ್ನು ಬೆಳೆಸುತ್ತದೆ, ಮಕ್ಕಳು ಗಳಿಸುವ ಅಂಕಗಳು ಅಷ್ಟೇ ಮುಖ್ಯ ಅಲ್ಲ ಅವರು ಗಳಿಸುವ ಜ್ಞಾನವು ಅಷ್ಟೇ ಮುಖ್ಯ ಇಂತಹ ಕಾರ್ಯಕ್ರಮದ ವೇದಿಕೆಗಳು ಮಕ್ಕಳ ಜ್ಞಾನ ವಿಕಾಸಕ್ಕೆ ಸೊಕ್ತ ಅವಕಾಶ ಕಲ್ಪಿಸಿ ಕೊಡುವುದರ ಜೊತೆಗೆ ಶ್ರೇಷ್ಠ ವಿಜ್ಞಾನಿಗಳನ್ನು ಸೃಷ್ಟಿಸಬಲ್ಲವು ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕೊಪ್ಪಳದ ಮುಖ್ಯ ಪಶುವೈದ್ಯಾಧಿಕಾರಿ ಚಂದ್ರಶೇಖರ ಜಿ ಯವರು ರೇಬಿಸ್ ರೋಗ ಹರಡುವಿಕೆ ಮತ್ತು ತೆಗೆದುಕೊಳ್ಳುವ ಮುಂಜಾಗ್ರತೆಯ ಕ್ರಮ ಕುರಿತು ಉಪನ್ಯಾಸ ನೀಡಿದರು. ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಸಾಕುವ ಪ್ರಾಣಿಗಳನ್ನು ಕೊಡಿ ಅವರ ಶಾಲಾ ಅಭ್ಯಾಸದ ಜೊತೆಗೆ ಅವರು ಕಟ್ಟಿಕೊಂಡ ಕನಸುಗಳೊಂದಿಗೆ ಗುರಿ ತಲುಪಲು ನಾವು ನೆರವಾಗಬೇಕು ಎಂದು ಹೇಳಿದರು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿನ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು ಎಂದು ಸಲಹೆ ನೀಡಿದರು.

 

ಶಾಲೆಯ ಪ್ರಾಂಶುಪಾಲರಾದ ಜಬಮಲೈ ರವರು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಬೆಂಬಲ ನೀಡಿದ ಎಲ್ಲರನ್ನೂ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿ ಎಲ್ಲಾ ವಿವಿಧ ಶಾಲಾ ಮಕ್ಕಳು ಕಾರ್ಯಕ್ರಮ ವಿಕ್ಷಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಫಾದರ್ ಮ್ಯಾಥ್ಯೂ ಹಾಗು ಎಸ್ ಎಫ್ ಎಸ್ ಸ್ಟೇಟ್ ಸ್ಕೂಲ್ ಪ್ರಾಂಶುಪಾಲರಾದ ಫಾದರ ಜೋಜೋ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೋಡಿ ಆಗಮಿಸಿ ಪೋಷಕರ ಜೋತೆ ಕುಳಿತುಕೊಂಡು ಕಾರ್ಯಕ್ರಮ ವಿಕ್ಷಿಸಿ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಫುಡ್ಡೀ ಫಾಂಟಾಸಿಯಾ ವಿವಿಧ ತಿಂಡಿ ತಿನಿಸುಗಳ ಅಂಗಡಿಗಳನ್ನು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಏರ್ಪಡಿಸಿದ್ದರು.
ಮಕ್ಕಳು ಕಾರ್ಯಕ್ರಮ ನಿರ್ವಹಿಸಿದರು.
ವಸ್ತು ಪ್ರದರ್ಶನದಲ್ಲಿ ಮಕ್ಕಳು ವಿಜ್ಞಾನ ಮತ್ತು ಕಲೆಗೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದರು.
ಕಾರ್ಯಕ್ರಮ ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ ಜರುಗಿತು.

Leave a Reply

Your email address will not be published. Required fields are marked *

error: Content is protected !!