Kanakagiri-Utsav-Logo

ಐತಿಹಾಸಿಕ ಕನಕಗಿರಿ ಉತ್ಸವಕ್ಕೆ ಕ್ಷಣಗಣನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , 01- ಜಿಲ್ಲೆಯ ಐತಿಹಾಸಿಕ ಕನಕಗಿರಿ ಉತ್ಸವ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಕನಕಗಿರಿಯ ಎಪಿಎಂಸಿ ಸಮುದಾಯ ಭವನ ಹಿಂಬಾಗದ ಮೈದಾನದಲ್ಲಿ ಆಯೋಜಿಸಲಾಗಿದ್ದು ಎರಡು ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಉತ್ಸವದ ಉದ್ಘಾಟನೆ : ಉತ್ಸವದ ಉದ್ಘಾಟನೆ ಇಂದು ಶನಿವಾರ ಸಂಜೆ 6:30ಕ್ಕೆ ಜರುಗಲಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೆರಿಸಲಿದ್ದಾರೆ.

ಉಪಮುಖ್ಯಮಂತ್ರಿ ಡಿ, ಕೆ ಶಿವಕುಮಾರ್ ಉಪಸ್ಥಿತಿ ಇರಲಿದ್ದು. ಕನ್ನಡ ಮತ್ತು ಸಂಸ್ಕೃತಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಮಗಡಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಕುಷ್ಟಗಿ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜೆ. ಜನಾರ್ಧನ ರೆಡ್ಡಿ, ವಿ.ಪ ಸದಸ್ಯರಾದ ಶಶೀಲ ನಮೋಶಿ, ಡಾ.ಚಂದ್ರಶೇಖರ್ ಪಾಟೀಲ್, ಶರಣಗೌಡ ಬಯ್ಯಾಪೂರ, ಶ್ರೀಮತಿ ಹೇಮಲತಾ ನಾಯಕ್,‌ ಕನಕಗಿರಿ ರಾಜ ವಂಶಸ್ಥರಾದ ರಾಜ ನವೀನಚಂದ್ರ ನಾಯಕ, ಜಿಲ್ಲಾಧಿಕಾರಿ ನಲಿನ್ ಅತುಲ್, ಸಿಇಓ ರಾಹುಲ್ ರತ್ನಂ ಪಾಂಡೇಯ, ಎಸ್ ಪಿ ಯಶೋಧಾ ವಂಟಿಗೋಡಿ ಇತರರು ಆಗಮಿಸಲಿದ್ದು ಐವತ್ತು ಸಾವಿರಕ್ಕು ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.

ಎರಡು ವೇದಿಕೆ : ಉತ್ಸವದಲ್ಲಿ ಎರಡು ವೇದಿಕೆ ಮಾಡಲಾಗಿದ್ದು ರಾಜಾ ಉಡಚಪ್ಪ ನಾಯಕ ಹಾಗೂ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ವೇದಿಕೆ ಮಾಡಲಾಗಿದ್ದು ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳು‌ ಜರುಗಲಿವೆ.

ಉತ್ಸವದಲ್ಲಿ ಬೆಳಿಗ್ಗೆ ಮೆರವಣಿಗೆ, ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟನೆ, ವಿಚಾರ ಗೋಷ್ಠಿ, ಮಹಿಳಾ ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!