
10 ನೇ ತರಗತಿಯ ಐಸಿಎಸ್ಇ ಫಲಿತಾಂಶ
ಎಸ್ ಎಫ್ ಎಸ್ ಶಾಲೆಗೆ ಉತ್ತಮ ಫಲಿತಾಂಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07- ಎಸ್ ಎಫ್ ಎಸ್‌ನ ಐಸಿಎಸ್‌ಸಿ ಶಾಲೆಯ ಉತ್ತಮ ಫಲಿತಾಂಶ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೊಂಡಿದೆ.
ಇತ್ತೀಚೆಗೆ 2023-24 ನೇ ಸಾಲಿನ ಐಸಿಎಸ್‌ಸಿ ಮಂಡಳಿಯು 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ನಗರದ ಎಸ್ ಎಫ್ ಎಸ್ ಐಸಿಎಸ್‌ಸಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಶೇ.100 ರಷ್ಟು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.
ಶಾಲೆಯು ಸತತವಾಗಿ 11ನೇ ಬಾರಿಗೆ ಶೇ.100 ಕ್ಕೆ ನೂರರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿದ್ದು ಜಿಲ್ಲೆಗೆ ಪ್ರಥಮ ಸ್ಥಾನ ಹೊಂದಿದೆ.
ಗೌತಮಿ ಯತ್ನಟ್ಟಿ ಶೇ. 98%
ದಿಶಾ ತಂಬ್ರಳ್ಳಿ 97.8%
ಆಶಿಶ್ ಚಂಡಕ್ 96.8%
ಈ ಬಾರಿ ಒಟ್ಟು 68 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಅವರಲ್ಲಿ 56 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ (ಡಿಸ್ಟಿಂಕ್ಷನ್) ಪಾಸಾಗಿದ್ದಾರೆ. 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಕು. ಗೌತಮಿ ಯತ್ನಟ್ಟಿ ಶೇ.98% ಅತೀ ಹೆಚ್ಚು ಅಂಕಗಳೊಂದಿಗೆ ಕೊಪ್ಪಳ ಜಿಲ್ಲೆಗೆ ಹಾಗೂ ಶಾಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ.
ಕು. ದಿಶಾ ತಂಬ್ರಳ್ಳಿ ಶೇ 97.8%ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಕು. ಆಶಿಶ್ ಜಿ ಚಂಡಕ್ ಶೇ 96.8% ಅಂಕಗಳೊಂದಿಗೆ ಶಾಲೆಗೆ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.
34 ವಿದ್ಯಾರ್ಥಿಗಳು ಶೇ 90% ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಶ್ರೇಷ್ಠ ಸಾಧನೆಗೈಯುವ ಮೂಲಕ ಶಾಲೆಗೆ ಹೆಮ್ಮೆ ತಂದಿರುವ ಎಲ್ಲ ವಿದ್ಯಾರ್ಥಿಗಳಿಗೆ, ಮಾರ್ಗರ್ಶನ ನೀಡಿದ ಶಿಕ್ಷಕ ಸಿಬ್ಬಂದಿ ವರ್ಗಕ್ಕೆ ಹಾಗೂ ಅತ್ಯುತ್ತಮ ಸಹಕಾರ ನೀಡಿದ ಶಾಲೆಯ ಎಲ್ಲ ಪಾಲಕರಿಗೆ ಶಾಲೆಯ ಪ್ರಾಂಶುಪಾಲರಾದ ಫಾದರ್ ಜಬಮಲೈ ಹಾಗೂ ಶಾಲಾ ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.