
ಸಿರುಗುಪ್ಪ: ಕಂಬಳಿ ಮಲ್ಲಿಕಾರ್ಜುನ ಬಿಜೆಪಿಗೆ ಘರ್ ವಾಪಸಿ
ಕರುನಾಡ ಬೆಳಗುಮ ಸುದ್ದಿ
ಸಿರುಗುಪ್ಪ,1- ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸೇರಿದ ಮುಖಂಡ ಕಂಬಳಿ ಮಲ್ಲಿಕಾರ್ಜುನ ಘರ್ ವಾಪಸಿಯಾಗಿ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಭಾರತೀಯ ಜನತಾ ಪಾರ್ಟಿಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಕಂಬಳಿ ಮಲ್ಲಿಕಾರ್ಜುನ ಕೆಲ ತಿಂಗಳ ಹಿಂದೆ ಶಾಸಕರಾದ ಬಿಎಮ್ ನಾಗರಾಜ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಬುಧವಾರ ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಧ್ವಜ ಹಿಡಿಯುವುದರೊಂದಿಗೆ ಮತ್ತೆ ಬಿಜೆಪಿ ಪಕ್ಷಕ್ಕೆ ಮರಳಿದ್ದಾರೆ.
ದಮ್ಮೂರು ಸೋಮಪ್ಪ ಉಡೆ ಗೋಳ್ ಖಾಜಾಸಾಬ್ ಎಂ ಕೃಷ್ಣ ಪೂಜಾರಿ ಗಾದಿಲಿಂಗ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಇದ್ದರು.