
ಕಕ್ಕಿಹಳ್ಳಿ : ವಿಶ್ವ ಬಂಧು ಸೇವಾ ಗುರು ಬಳಗದಿಂದ ಶಾಲೆಯಲ್ಲಿ ಗೋಡೆ ಬರಹ
ಕರುನಾಡ ಬೆಳಗು ಸುದ್ದಿ
ಕುಕನೂರ 01-ವಿಶ್ವಬಂಧು ಸೇವಾ ಗುರುಬಳಗದಿಂದ ರವಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30 ರವರೆಗೆ ಕಕ್ಕಿಹಳ್ಳಿ ಶಾಲೆಯಲ್ಲಿ 15 ನೇ ಗೋಡೆ ಬರಹ ಸೇವಾ ಕಾರ್ಯ ಜರುಗಿತು.
ಸೇವಾ ಕಾರ್ಯ ಜರುಗುವ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಶಿಕ್ಷಣ ಪ್ರೇಮಿಗಳು,SDMC ಮತ್ತು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಆಗಮಿಸಿ ಶಾಲೆ ಒಂದೇ ದಿನದಲ್ಲಿ ಶೃಂಗಾರಗೊಂಡದ್ದನ್ನು ಕಂಡು ಮೆಚ್ಚುಗೆ ಸೂಚಿಸಿ ಸಂತಸ ವ್ಯಕ್ತಪಡಿಸಿದರು.
ನೌಕರರ ಸಂಘದ ಅಧ್ಯಕ್ಷರಾದ ಮಹೇಶ ಸಬರದ ರವರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಾರುತೇಶ ತಳವಾರ ರವರು ಆಗಮಿಸಿ ವೀಕ್ಷಿಸಿ ಅಗತ್ಯ ಮಾರ್ಗದರ್ಶನ ಮಾಡಿ ನಿಸ್ವಾರ್ಥವಾಗಿ, ಸಮರ್ಪಣಾ ಮನೋಭಾವದಿಂದ ಮಾಡುವ ನಿಮ್ಮ ಸೇವೆ ಅನನ್ಯವಾದುದು ಎಂದು ತಿಳಿಸಿ ಪ್ರೋತ್ಸಾಹಿಸಿದರು.
ಸೇವಾ ಕಾರ್ಯದಲ್ಲಿ ಮಲ್ಲಿಕಾರ್ಜುನ ಕುಂಬಾರ, ಕಳಕೇಶ ಬಳಿಗಾರ, ಖಾಜಾಸಾಬ ಹೊಸಳ್ಳಿ, ಕೊಟ್ರೇಶ ಪಟ್ಟಣ,ಮಹಾವೀರ ಕಲ್ಭಾವಿ, ಮುರ್ತುಜಾಸಾಬ ಮುಜಾವರ, ಮಾರುತಿ ಹಾದಿಮನಿ, ಕಲ್ಲಪ್ಪ ಅಲ್ಲಾಪುರ, ತ್ರಿವಿಕ್ರಮಾನಂದ ವಾಲಿ, ಬಸವರಾಜ ಸಾರಂಗಮಠ, ಪ್ರಭು ಶಿವನಗೌಡ್ರ, ಶಿವಕುಮಾರ ಹೊಂಬಳ, ಪರಮೇಶ ಚಿಂತಾಮಣಿ, ಮಂಜುನಾಥ ಕೊಡಕೇರಿ, ರಮೇಶ ಹೊಂಬಳ, ಕಳಕನಗೌಡ ಪಾಟೀಲ್, ಬಸವರಾಜ ಒಳಗುಂದಿ, ಸೋಮಣ್ಣ ನಾಯಕ, M G ರಾಯಣ್ಣವರ ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥರಾದ ಸಿದ್ದಲಿಂಗಪ್ಪ ಶ್ಯಾಗೋಟಿ ರವರು ಭಾಗವಹಿಸಿದ್ದರು.
ನೌಕರರ ಸಂಘದ ಖಜಾಂಚಿಗಳಾದ ಅಶೋಕ ಮಾದಿನೂರ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಮಹೇಶ ಬೆದವಟ್ಟಿ ಹಾಗೂ ಈ ಶಾಲೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ ಶಿಕ್ಷಕರು ಆಗಮಿಸಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಮೇಘರಾಜ ಬಳಗೇರಿ, ಯುವ ಮುಖಂಡರು ಶ್ರೀ ಯಮನೂರಪ್ಪ ಕಟ್ಟಿಮನಿ,ಗ್ರಾಮ ಪಂಚಾಯಿತಿ ಸದಸ್ಯರು ಬಳಗೇರಿ ಶ್ರೀ ವಿರೂಪಾಕ್ಷಯ್ಯ ಕುರ್ತಕೋಟಿ. ಗ್ರಾಮ ಪ್ರಮುಖರು ಶ್ರೀ ಸುರೇಶ್ ಮನ್ನಾಪುರ SDMC ಅಧ್ಯಕ್ಷರು ಶ್ರೀ ಮತಿ ಜ್ಯೋತಿ ನಾಗಯ್ಯ ಕುರ್ತಕೋಟಿ SDMC ಉಪಾಧ್ಯಕ್ಷರು. ವೆಂಕಟೇಶ್ ಕಟ್ಟಿಮನಿ, ತಿರುಪತಿ ಕಟ್ಟಿಮನಿ. SDMC ಸದಸ್ಯರು, ಶ್ರೀ ಹಂಪಣ್ಣ ಕಟ್ಟಿಮನಿ ಗ್ರಾಮದ ಹಿರಿಯರು ಬೆಳಿಗ್ಗೆಯಿಂದ ಸಂಜೆ ಯವರೆಗೆ ಉಪಸ್ಥಿತರಿದ್ದು ಮನೆಯ ಕಾರ್ಯಕ್ರಮದಂತೆ ಅತ್ಯಂತ ಕಾಳಜಿ ವ್ಯಕ್ತಪಡಿಸಿದ್ದು ಶಾಲೆ ಮತ್ತು ಶಿಕ್ಷಕರ ಬಗ್ಗೆ ಇರುವ ಪ್ರೀತ್ಯಾಭಿಮಾನ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವ ಗೊತ್ತಾಗುತ್ತದೆ.
ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಪ್ರಭುಲಿಂಗ ಗುರಿಕಾರ ಶಾಲೆಯ ಶಿಕ್ಷಕರಾದ ಶ್ರೀ ಶಂಭು ಅರಿಷನದ ಶ್ರೀಮತಿ ಅಕ್ಕಮಹಾದೇವಿ ಹಿರೇಮಠ್ ಶ್ರೀಮತಿ ಮಂಜುಳಾ ಜೋಶಿ ಶ್ರೀಮತಿ ಲೀಲಾವತಿ ಲಂಗಟಿ ಶ್ರೀಮತಿ ಸಂಧ್ಯಾವಳಿ ದೀಕ್ಷಿತ್ ಉಪಸ್ಥಿತರಿದ್ದರು.