
ಕಣ್ಮರೆಯಾದ ಜಿಲ್ಲೆಯ ರಂಗಭೂಮಿ ನಕ್ಷತ್ರ
ಕಲಾವಿದ ಬಾಬಣ್ಣ ಕಲ್ಮನಿ(90) ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 08- ಜಿಲ್ಲೆ ಹಿರಿಯ ರಂಗಭೂಮಿ ಹಿರಿಯ ಕಲಾವಿದ ಬಾಬಣ್ಣ ಕಲ್ಮನಿ(90) ನಿಧನರಾಗಿದ್ದಾರೆ.
ಅವರು ರಂಗಭೂಮಿ ದೂರದರ್ಶನ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದು ಪತ್ನಿ ಹಾಗು ಮಕ್ಕಳು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಬಾಬಣ್ಣಗುಬ್ಬಿ ವೀರಣ್ಣ ಪುರಸ್ಕೃತರಾಗಿದ್ದ ಬಾಬಣ್ಣ ಕಲ್ಮನಿಗೆ ಮಾರ್ಚ 24 ರಂದು ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಣೆ ಯಾಗಿತ್ತು.
ಗುಬ್ಬಿ ವೀರಣ್ಣ ಪ್ರಶಸ್ತಿ ಪ್ರಧಾನ ಮುಂಚೆಯೇ ಇಹಲೋಕ ಯಾತ್ರೆ ಮುಗಿಸಿದ ಬಾಬಣ್ಣ ಜೀವಂತವಿರುವಾಗ ಪ್ರಶಸ್ತಿ ನೀಡಿ ಎಂದಿದ್ದರು. ಇಂದು ಸಂಜೆ ಕುಕನೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.