
ಕನಗಿರಿ ಮತ್ತು ಕಾರಟಗಿ ಪ್ರವಾಸೋದ್ಯಮ ತಾಣವಾಗಿಸುವ ಚಿಂತನೆ – ತಂಗಡಗಿ
ಕರುನಾಡ ಬೆಳಗು ಸುದ್ದಿ
ಡಾ: ಪಂಡಿತ ಪುಟ್ಟರಾಜ ಗವಾಯಿಗಳ ವೇದಿಕೆ
ಸಂತೋಷ ದೇಶಪಾಂಡೆ
ಕನಕಗಿರಿ, 02- ಯುವ ಪಿಳಿಗೆಗೆ ಕನಕಗಿರಿ ಇತಿಹಾಸ ತಿಳಿಸಲು ಉತ್ಸವಗಳ ಆಚರಣೆ ಮಾಡುವ ಮೂಲಕ ಇತಿಹಾಸದ ಅವಲೋಕನ ಚಿಂತನೆ – ಮಂತನ ನಡೆಯುತದೆ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.
ಅವರು ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಕನಕಗಿರಿ ಇತಿಹಾಸ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟ ಕ್ಕೆ ಇತಿಹಾಸ ಪರಿಚಯವಿದೆ. ಹಂಪಿ ಮೈಸೂರಲ್ಲಿ ನಮ್ಮ ಇತಿಹಾಸದ ನಂಟಿದೆ.
ಕನಕಗಿರಿ ಮತ್ತು ಕಾರಟಗಿ ತಾಲ್ಲೂಕನ್ನು ಪ್ರವಾಸೋದ್ಯಮ ತಾಣವಾಗಿಸುವ ಚಿಂತನೆ ಇದೆ. ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಬಜೆಟ್ ನಲ್ಲಿ 100 ಕೋಟಿ ಅನುದಾನ ಮೀಸಲಿಟ್ಟಿದ್ದು, ಮುಂದಿನ ತಿಂಗಳು ಅಭಿವೃದ್ಧಿಗೆ ವೇಗ ಕೊಡಲಾಗುವುದು.
ಕನಕಗಿರಿ ಉತ್ಸವದ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕಿದೆ. ಇಲ್ಲಿನ ರಾಜರ ಇತಿಹಾಸವನ್ನು ತಿಳಿಸಿ,ರೈತರ ಬಗ್ಗೆ ಅವರಿಗಿದ್ದ ಅಂದಿನ ಚಿಂತನೆಗಳು ಬಗ್ಗೆ ಚರ್ಚೆ ನಡೆಯಲಿ.
ಕನಕಗಿರಿಯಲ್ಲಿ 701 ಬಾವಿವಳಿವೆ. ಪುರಾತನ ಕಾಲದ ಗತವೈಭವನ್ನು, ಕನಕಗಿರಿಯ ಪಾಳೇಗಾರರು ನೀಡಿದ ಅಭಿವೃದ್ಧಿ ಕೆಲಸಗಳನ್ನು ನೆನೆಯಬೇಕಿದೆ. ಕನಕಗಿರಿ ಕೊಪ್ಪಳಕ್ಕೆ ಮಾತ್ರ ಸೀಮಿವಲ್ಲ. ಇದರ ಚರಿತ್ರೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು.
ಏಷ್ಯಾ ಖಂಡದಲ್ಲೇ ಅತಿದೊಡ್ಡದ ರೈಸ್ ಟೆಕ್ನಾಲಜಿ ಪಾರ್ಕ್ ನ್ನು ನಮ್ಮ ಅವಧಿಯಲ್ಲಿ ಸ್ಥಾಪಿಸಿದ್ದೇವೆ. ಬೀಜ ಬಿತ್ತುವ ಕೆಲಸ ಮಾಡಬೇಕು.ಆ ಬಳಿಕ ಅದರ ಫಲಕಾಣಬೇಕು.ಗೋಷ್ಠಿಯಲ್ಲಿ ಇಂದು, ನಾಳೆಯ ಅಭಿವೃದ್ಧಿ ಬಗ್ಗೆ ಚಿಂತನೆ ಆಗಲಿ. ರೈತ, ಬಡವ, ಸಾಮಾನ್ಯ ಜನರ ಬಗ್ಗೆ ಚರ್ಚೆಯಾಗಬೇಕು.
ಕೆರೆ ತುಂಬಿಸುವ ಕೆಲಸ ಮಾಡಿ ಎಂದು ಯಾರು ಹೇಳಲಿಲ್ಲ. ಆಗ ಕೆಲವರು ಕೆರೆ ತುಂಬುವುದಿಲ್ಲ. ತಂಗಡಗಿ ಮನೆ ತುಂಬಿದೆ ಎಂದು ಹಾಸ್ಯ ಮಾಡಿದರು. ಆದರೆ ಆ ಕೆಲಸ ಮಾಡಿದ ಜಬಳಿಕ ನಾನು ಜನರ ಮನಸ್ಸಿನಲ್ಲಿದ್ದೇನೆ ಎಂಬುದನ್ನು ತಿಳಿದು ತೃಪ್ತಿಪಟ್ಟಿದ್ದೇನೆ.ರಾಜಕೀಯಕ್ಕಿಂತಲ್ಲೂ ಹೆಚ್ಚು ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಿದೆ.
ಕನಕಗಿರಿಯನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಕೆಲಸವಾಗಬೇಕು. ಸಮಾನಾಂತರ ಜಲಾಶಯದ ಬಗ್ಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದರು. ನೀರು ಇದ್ರೂ 14 ಸಮಾನಾಂತರ ಜಲಾಶಯಗಳು ಆದರೆ ನೀರಾವರಿ, ಪೂರ್ಣ ಪ್ರಮಾಣದ ಒಣಬೇಸಾಯಕ್ಕೆ ಒಳಿತಾಗಲಿದೆ. ನೀರಿನ ವಿಚಾರದಲ್ಲಿ ಯಾವುದೇ ವಿರೋಧ ಬೇಡ.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಮಾಡಿದ ಹೆಮ್ಮೆ ನಮಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣ ಅವರ ಮಾದರಿಯಲ್ಲೇ ಹೆಜ್ಜೆ ಇಟ್ಟಿದ್ದಾರೆ.
ಆಶಯದ ನುಡಿ ಗಳನ್ನಾಡಿದ ಮಹೇಬುಬ ಹುಸೇನ ಕನಕಗಿರಿ ಉತ್ಸವದ ರೂವಾರಿ ಶಿವರಜ ಏಸ್ ತಂಗಡಗಿ, ದೇಗುಲಗಳ ನಗರ ಕನಕಗಿರಿ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಾರೆ ಎಂದು ಅಭಿನಂದಿಸಿದರು.
ಹಗರಿಬೊಮ್ಮನಹಳ್ಳಿ ಸಾಹಿತಿ ಡಾ. ಡಿ.ಕೆ ಮಾಳೆ – ‘ಕನಕಗಿರಿ ಪಾಳೆಗಾರರ ಕೊಡುಗೆ’, ಕೊಪ್ಪಳ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ- ‘ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕುಗಳ ಅಭಿವೃದ್ಧಿ ಅವಲೋಕನ ನಿನ್ನೆ, ಇಂದು, ನಾಳೆ’- ಸಾಹಿತಿ ಪವನಕುಮಾರ್ ಗುಂಡೂರು ‘ ಕನಕಗಿರಿ ಕಲೆ ಹಾಗೂ ಸಾಹಿತ್ಯ ಪರಂಪರೆ’, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬದರಿಪ್ರಸಾದ್- ಕೊಪ್ಪಳ ಜಿಲ್ಲೆಯ ಕೃಷಿ ನೀರಾವರಿ ಹಾಗೂ ತೋಟಗಾರಿಕೆ ಅಭಿವೃದ್ಧಿ ಅವಲೋಕನ’ ಹಾಗೂ ಸಾಹಿತಿ ಡಾ. ಇಮಾಮಸಾಹೇಬ್ ಹಡಗಲಿ ಅವರು ‘ಕನಕಗಿರಿ ಚರಿತ್ರೆ, ವಾಸ್ತುಶಿಲ್ಪ ಹಾಗೂ ರಂಗಭೂಮಿ ಪರಂಪರೆ’ ಕುರಿತು ವಿಷಯ ಮಂಡಿಸಿದರು.
ಅಧ್ಯಕ್ಷತೆಯನ್ನು ಶರಣ ಬಸಪ್ಪ ಕೊಲ್ಕಾರವಹಿಸಿದ್ದರು, ವೇದಿಕೆ ಮೇಲೆ ಮಹೇಬುಬ , ಚಿಂತಕ ಸಿ.ಕೆ ಚೆನ್ನಬಸವ ಸ್ವಾಮಿ, ದುರ್ಗಾದಾಸ್ ಯಾದವ್,ಡಾ.ನಾಗೇಶ ಪೂಜಾರ. ಡಾ ಯಮನೂರಪ್ಪ ವಡಕಿ, ಡಾ, ಶರಣಬಸಪ್ಪ ಬಿಳೆಯಲೆ, ಪವನ್ ಕುಮಾರ ಗುಂಡುರ್, ಡಾ, ಬಸವರಾಜ , ಡಾ ,ಇಮಾಮ ಸಾಹೆಬ್ ಹಡಗಲಿ ಇತರರು ಇದ್ದರು.