
ಕನ್ನಡ ವಿಭಾಗದ ವತಿಯಿಂದ ಜಾಜಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಗಂಗಾವತಿ,25- ಕುವೆಂಪು ಭಾಷಾ ಭಾರತಿ ಗೆ ಸದಸ್ಯರಾಗಿ ನೇಮಕಗೊಂಡಿರುವ ಎಸ್.ಕೆ.ಎನ್.ಜಿ ಕಾಲೇಜಿನ ಪ್ರಾಂಶುಪಾಲ ಡಾ.ಜಾಜಿ ದೇವೇಂದ್ರಪ್ಪ ಇವರನ್ನು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ವಿಭಾಗದ ಸಂಯೋಜಕಿ ಡಾ.ಮುಮ್ತಾಜ ಬೇಗಂ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಭಾಷಾ ಭಾರತಿ ಗೆ ಸದಸ್ಯರಾಗಿ ನೇಮಕಗೊಂಡಿರುವ ಡಾ.ಜಾಜಿ ದೇವೇಂದ್ರಪ್ಪ ಅವರು ಅನುವಾದದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ ಅನುವಾದ ಪ್ರಕಾರ ಬಹಳ ವಿಶೇಷವಾದುದು ಡಾ.ಜಾಜಿ ದೇವೇಂದ್ರಪ್ಪನವರು ಕನ್ನಡ, ತೆಲುಗು ಭಾಷೆಯಲ್ಲಿ ಪರಿಣಿತಿ ಹೊಂದಿದ್ದಾರೆ ಅವರ ನೇಮಕ ನಮಗೆಲ್ಲ ಖುಷಿ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಅನುವಾದ ಕ್ಷೇತ್ರಕ್ಕೆ ಬಹಳ ಮಹತ್ವವಿದೆ ಕನ್ನಡದಲ್ಲಿ ಅನುವಾದ ತನ್ನದೇ ಆದ ಮೌಲಿಕ ಸ್ಥಾನವನ್ನು ಹೊಂದಿದೆ.ಅನುವಾದ ಸವಾಲಿನ ಕೆಲಸ.ಶಕ್ತಿ ಮೀರಿ ಕೆಲಸ ಮಾಡುವೆ ಎಂದರು.
ಸಭೆಯಲಿ ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಕಲಶೆಟ್ಟಿ, ಅರ್ಥಶಾಸ್ತ್ರ ವಿಭಾಗ ದ ಮುಖ್ಯಸ್ಥ ಡಾ.ವೈ.ಎಸ್.ವಗ್ಗಿ, ಪತ್ರಿಕೋದ್ಯಮ ವಿಭಾಗದ ಡಾ.ರಾಘವೇಂದ್ರ ವಡಕಿ, ಡಾ.ಬಸವರಾಜ ಗೌಡನಬಾವಿ, ಡಾ.ಶಿಲ್ಪಾ, ಡಾ.ಉಷಾರಾಣಿ, ಬಾಲಪ್ಪ ನಾಯಕ ಇನ್ನಿತರರು ಉಪಸ್ಥಿತರಿದ್ದರು.
ಗುಂಡೂರು ಪವನ್ ಕುಮಾರ್ ನಿರೂಪಿಸಿದರು.