6ce8e133-ff7b-44a9-95c5-41568337b0e2

ಕರಮುಡಿಯಲ್ಲಿ ೨೬ ರಂದು ಶ್ರೀಕರವೀರ ಭದ್ರೇಶ್ವರ

ಕಾರ್ತಿಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು.

ಕರುನಾಡ ಬೆಳಗು ಸುದ್ದಿ
ಯಲಬುರ್ಗಾ— ತಾಲೂಕಿನ ಕರಮುಡಿ ಗ್ರಾಮದಲ್ಲಿ ನಾಳೆ ೨೫ ರಂದು ಬೆಳಿಗ್ಗೆ 9 ಕ್ಕೆ ಶ್ರೀಕರವೀರ ಭದ್ರೇಶ್ವರ ಕಾರ್ತಿಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದಲ್ಲಿ ಕುದರಿಮೋತಿಯ ವಿಜಯ ಮಹಾಂತ ಸ್ವಾಮಿಗಳು ˌ ಯಲಬುರ್ಗಿಯ ಸಿದ್ದರಾಮೇಶ್ವರ ಸ್ವಾಮಿ ಹಾಗೂ ಬಸವಲಿಂಗೇಶ್ವರ ಸ್ವಾಮಿˌ ನಿಡಗುಂದಿಕೊಪ್ಪದ ಚನ್ನಬಸವಸ್ವಾಮಿ ಹಾಗೂ ರೋಣದ ಗುರುಪಾದೇಶ್ವರ ಸ್ವಾಮಿಗಳವರ ಸಾನಿಧ್ಯದಲ್ಲಿ ಸುಮಾರು 300 ಜನ ಮುತ್ತ್ಯೇದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಂತರ 12 ಘಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾಯ್ರಕ್ರಮ ಜರುಗಲಿದೆˌ

ಉದ್ಘಾಟಕರಾಗಿ ಶಾಸಕಬಸವರಾಜ ರಾಯರೆಡ್ದಿ ಆಗಮಿಸುವರು. ಮಾಜಿ ಸಚಿವ ಹಾಲಪ್ಪ ಆಚಾರ ಜ್ಯೋತಿ ಬೆಳಗಿಸುವರು.ಗ್ರಾˌಪಂ.ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣನವರ ಅಧ್ಯಕ್ಷತೆ ವಹಿಸುವರು. ಮಂಗಳೂರಿನ ಅಮೀರಅಶ್ ಹರಿ ಬನ್ನೂರರವರು ಭಾವೈಕ್ಯತೆ ಬಗ್ಗೆಉಪನ್ಯಾಸ ನೀಡುವರು ನಂತರ ಶ್ರೀಕರವೀರಭದ್ರೇಶ್ವರ ಕಾರ್ತಿಕೊತ್ಸವ ಇದೇ ದಿ. 26 ರಂದು ರಾತ್ರಿ 8ಕ್ಕೆ ಜರುಗಲಿದೆ ಎಂದು ಕರವೀರಭದ್ರೇಶ್ವರ ದೇವಸ್ಥಾನದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!