f723957a-775a-4820-a9f4-94d05189c7f5

ತರಲಕಟ್ಟಿ ಕಲಾವಿದ ಶ್ರೀಕಾಂತಗೌಡ ಮಾಲಿ ಪಾಟೀಲ್ ಗೆ

ಕರ್ನಾಟಕ ಕಲಾರತ್ನ ಪ್ರಶಸ್ತಿ

 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ ,21 –    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ 2023-ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ತರಲಕಟ್ಟಿ ಗ್ರಾಮದ ರಂಗಭೂಮಿಯ ಮತ್ತು ಜನಪದ ಗೀತೆ ಕಲಾವಿದ ಶ್ರೀಕಾಂತಗೌಡ ಮಾಲಿ ಪಾಟೀಲ್ ರವರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

ಡಿಸೆಂಬರ್ 23 ರಂದು ಬೆಂಗಳೂರಿನ ರವೀಂದ್ರಕಲಾ ಕ್ಷೇತ್ರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪತ್ರಕರ್ತರ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ.

ಬೆಂಗಳೂರು ಆವಲಹಳ್ಳಿರಾಮಕೃಷ್ಣ ವೇದಾಂತ ಆಶ್ರಮದ ಶ್ರೀಮದ್‌ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಶ್ರೀ ಶ್ರೀ  ಅಭಯನಂದಾ ಮಹಾರಾಜ್ ಹಾಗೂ ಸುಪ್ರೀಂ ಕೋರ್ಟ್ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ವಿ ಗೋಪಾಲಗೌಡ ಮತ್ತು ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಶ್ರೀಕಾಂತಗೌಡ ಮಾಲಿ ಪಾಟೀಲ್ ರವರು ಬಾಲ್ಯ ದಿಂದಲೆ ರಂಗಭೂಮಿಯ ಒಲವು ಆಸಕ್ತಿಯಿಂದ ಗಮನ ಹರಿಸಿದರು 1991-1992 ನೇ ಸಾಲೀನಲ್ಲಿ “ದುರ್ಗದ ಹುಲಿ ಆರ್ಥಾತ್ ರಾಜ ವೀರ ಮದಕರಿ ನಾಯಕ ” ನಾಟಕದಲ್ಲಿ ತಮ್ಮ ತಂದೆ ಮತ್ತು ಅಣ್ಣ ತಮ್ಮ ಮೂರು ಜನ ಒಂದೇ ದಿನ ಒಂದೇ ನಾಟಕದಲ್ಲಿ ಮೂರು ತರಹ ಪಾತ್ರಕ್ಕೆಬಣ್ಣ ಹಚ್ಚಿಕೊಂಡು ಆ ಪಾತ್ರಗಳಿಗೆ ಜೀವ ತುಂಬಿ ಜನಮನ ಸೆಳದಿದ್ದಾರೆ ಅಮೋಘ. ಮುಗ್ದತೆ. ಅಭಿನಯ ನೀಡಿದ್ದಾರೆ.
ಗೀಗೀಪದ ,ಲಾವಣಿ ಪದ, ಕ್ರಾಂತಿಗೀತೆಗಳು.ತತ್ವ ಪದಗಳನ್ನಾಡುತ್ತಾ ಹಲವಾರು ವರ್ಷಗಳಕಾಲ ಯುವ ಜನ ಮೇಳದಲ್ಲಿ ಭಾಗವಹಿಸಿ ಕಲಾ ಪ್ರದರ್ಶನಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಗಿರಿಜನ ಉತ್ಸವ, ಗುರು ಶಿಷ್ಯ ಪರಂಪರೆ ಕಾರ್ಯಕ್ರಮಗಳನ್ನು ಆಯೋಜಿಸಿ   ಗೀಗೀ ಪದಗಳ ತರಬೇತಿ ನೀಡಿದ್ದಾರೆ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ ಇಂದು ಯಲಬುರ್ಗಾ ತಾಲೂಕಾ ವರದಿಗಾರರಾಗಿ ಉತ್ತಮ ಮತ್ತು ಪ್ರಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!