IMG-20231104-WA0024

ಇಷ್ಟಲಿಂಗದಿಂದ ಭಾವ ಶುದ್ದಿ ಮನಶುದ್ದಿ -ಬರಗುಂಡಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ ,4 – ಪ್ರತಿಯೊಬ್ಬ ಮನುಷ್ಯನು ತಾನು ಮಾಡುವ ಕಾಯಕದಲ್ಲಿ ನಿಷ್ಠೆ.ಪ್ರಮಾಣಿಕತೆ.ಶುದ್ದ ವಾದ ಭಕ್ತಿ ಇರಬೇಕು ಮತ್ತು ಹಲವಾರು ಪುಣ್ಯಕ್ಷೇತ್ರಗಳಿಗೆ ತೆರಳಿ ಸ್ನಾನ ಮಾಡಿದರೆ ದೇಹ ಶುದ್ದಿಯಾಗಬಹುದೆ ವಿನಹ ಭಾವ ಶುದ್ದಿಯಾಗದು , ಇಷ್ಟಲಿಂಗದಿಂದ ಭಾವ ಶುದ್ದಿ ಮನಸುದ್ದಿ ಯಾಗುತ್ತದೆ ಶರಣ ಅಶೋಕ ಬರಗುಂಡಿ ಹೇಳಿದರು.
ತಾಲೂಕಿನ ಕಲ್ಲಭಾವಿ ಗ್ರಾಮದಲ್ಲಿ ಸಾಯಂಕಾಲ ವೀರಬಸವಾರ್ಯಮಠ ಕಲಭಾವಿಯಲ್ಲಿ ಲಿಂಗೈಕ್ಯ ಪೂಜ್ಯ ಶ್ರೀ ಮಲ್ಲಿನಾಥ ಶರಣರ ಸ್ಮರಣಾರ್ಥ183 ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ವಚನ ಚಿಂತನಾ ಜರುಗೀತು ಚಿಂತನಾ ವಿಷಯ ಹಾಲು ಹಿಡಿದು ಬೆಣ್ಣೆಯನರಸಲುಂಟೆ .

ಲಿಂಗವ ಹಿಡಿದು ಪುಣ್ಯ ತಿರ್ಥಕ್ಕೆಹೋಗಲುಂಟೆ.ಇಂತಲ್ಲದ ಗುರು ಕೊಟ್ಟ ಲಿಂಗವ ಕಿರಿದು ಮಾಡಿ .ತಿರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನ ಎಂಬ ವಚನ ಚಿಂತನಾ ವಿಷಯ ಕಾರ್ಯಕ್ರಮ ಜರಗೀತು.
ಕಾರ್ಯಕ್ರಮ ಉದ್ದೇಶಿಸಿ ಶರಣ ಅಶೋಕ ಬರಗುಂಡಿ ಮಾತನಾಡಿ ಮನುಷ್ಯತ್ವ ಬೆಳಗಲು ಬಸವ ತತ್ವ ಹಣತೆ ಪ್ರಜ್ವಲಿಸಲಿ ದಿನ ನಿತ್ಯ ಸ್ವಾರ್ಥಕೇಂದ್ರಿತವಾಗುತ್ತಿರುವ ಸಮಾಜವನ್ನು ಹಾಗೂ ಯಾಂತ್ರಿಕವಾಗುತ್ತಿರುವ ಬದುಕನ್ನು ಸರಿದಾರಿಗೆ ತಂದು ಮನುಷ್ಯತ್ವ ಬೆಳಗಿಸಲು ಮನುಷ್ಯತ್ವ ಮಾನವಿಯತೆ ಸಮದಾನ ನೆಮ್ಮದಿ ಎಂಬ ಪ್ರಸನ್ನಭಾವ ಎಂಬ ಹಣತೆ ಬೆಳಗಿಸಲು ಬಸವಾದಿ ಶರಣ ಶರಣಿಯರ ತತ್ವಗಳು ನಮ್ಮಲ್ಲಿ ಹಣತೆಯಂತೆ ಪ್ರಜ್ವಲಿಸಬೇಕೆಂದು ಹೇಳಿದರು.
ಪ್ರಾಸ್ತಾವೀಕವಾಗಿ ಶರಣ ಅಮರೇಶಪ್ಪ ಗಡಿಹಳ್ಳಿ ಮಾತನಾಡಿದರು. ರುದ್ರಪ್ಪ ಹಳ್ಳಿ,ಮಹಾದೇವಪ್ಪ ತೆನ್ನಳ್ಳಿ ಅಮರೇಶ ಬಳ್ಳಾರಿ, ಎಸ್,ಎ,ಮುಗದ ತಿಮ್ಮನಗೌಡ ಚಿಲ್ಕರಾಗಿ ಮಾತನಾಡಿದರು ಶರಣ ವಿರುಪಾಕ್ಷಯ್ಯ ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು
ಕಾರ್ಯಕ್ರಮದಲ್ಲಿ ರಾಯಚೂರ ಜಿಲ್ಲಾ ಬಸವಕೇಂದ್ರದ ಜಿಲ್ಲಾದ್ಯಕ್ಷ ವೀರಭದ್ರಪ್ಪ ಕುರಕುಂದಿ, ಹನಮಗೌಡ ಬಳ್ಳಾರಿ,
ಎಸ್,ಎ ಕವಳಿಕಾಯಿ,. ಬಸವರಾಜಪ್ಪ ಇಂಗಳದಾಳ.
ರೇಣಕಪ್ಪ ಮಂತ್ರಿ ,ನಾಗನಗೌಡ ಜಾಲಿಹಾಳ ,ಪಾಲಾಕ್ಷಪ್ಪ ಹುಣಶಿಹಾಳ, ಶಂಕ್ರಪ್ಪ ತರಲಕಟ್ಟಿ ,ಶಿಕ್ಷಕ ದೇವಪ್ಪ ವಾಲ್ಮೀಕಿ,ಮುದಿಯಪ್ಪ ಮೇಟಿ, ಸಣ್ಣ ಅಮರಪ್ಪ ಅಳ್ಳಳ್ಳಿ,ಗುಂಡಪ್ಪ ಹಡಪದ,ಮೌನೇಶ ಪತ್ತಾರ, ಲೋಕೇಶ ನಾಯಕ, ಮುದಿಯಪ್ಪ ಕಲ್ಲಭಾವಿ,ಪತ್ರಕರ್ತರಾದ ಶ್ರೀಕಾಂತಗೌಡ ಮಾಲಿ ಪಾಟೀಲ್, ಬಸಣ್ಣ ದೇವಲ್, ಅಮರೇಶ ದೇವಲ್ ಸೇರಿದಂತೆ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!