
ಕವಲೂರು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ : ತಾ.ಪಂ. ಇಒ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 6- ಕೊಪ್ಪಳ ತಾಲೂಕಿನ ಕವಲೂರು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ, ಗ್ರಾಮದ ಸಮಸ್ಯೆಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ತಿಳಿಸಿದ್ದಾರೆ.
ಕವಲೂರು ಗ್ರಾಮದ ಜನಸಂಖ್ಯೆ 9,815 ಇದ್ದು, ಗ್ರಾಮದಲ್ಲಿ 04 ಕುಡಿಯುವ ನೀರಿನ ಬೋರ್‌ವೆಲ್‌ಗಳು ಇರುತ್ತವೆ. ಶುದ್ದ ಕುಡಿಯುವ ನೀರು ಘಟಕ-04 ಇದ್ದು, ಅವುಗಳಲ್ಲಿ 01 ಚಾಲ್ತಿಯಲ್ಲಿದ್ದು, 03 ಘಟಕಗಳು ದುರಸ್ಥಿಯಲ್ಲಿವೆ. ದುರಸ್ಥಿಯಲ್ಲಿರುವ 03 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲು ಕ್ರಮವಹಿಸಲಾಗಿದೆ.
ತರಿಂದ 03 ಖಾಸಗಿ ಬೋರ್‌ವೆಲ್ ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಟ್ಯಾಂಕರಿನಿಂದ ಪ್ರತಿ ದಿನಕ್ಕೆ 03 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತದೆ. ನೆಲೋಗಿಪುರ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಪ್ರತಿನಿತ್ಯ ನೀರು ಸರಬರಾಜು ಆಗುತ್ತಿದೆ.
ಗ್ರಾಮದಲ್ಲಿ ಸರಬರಾಜು ಆಗುತ್ತಿರುವ ಕುಡಿಯುವ ನೀರು ಶುದ್ದವಾಗಿದ್ದು ಕುಡಿಯಲು ಯೋಗ್ಯವಾಗಿರುತ್ತವೆ. ಕವಲೂರು ಗ್ರಾಮದಲ್ಲಿ ಯಾವುದೇ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮವಹಿಸಲಾಗಿರುತ್ತದೆ ಎಂದು ತಾ.ಪಂ. ಇಒ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.