
ಸಂಶೋಧನಾ ವಿದ್ಯಾರ್ಥಿನಿ
ಕವಿತ ಗೆ ಪಿಎಚ್.ಡಿ. ಪದವಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ )೦೪ – ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಾಯನ ವಿಭಾಗದ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿನಿಯಾದ ಕವಿತ ಇವರು ಇತ್ತೀಚಗೆ ನಡೆದ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಸಮಾಜವಿಜ್ಞಾನ ನಿಕಾಯದ ಡೀನರ ಸಮ್ಮುಖದಲ್ಲಿ ಪಿಎಚ್.ಡಿ. ಅಧ್ಯಯನಕ್ಕೆ ಸಂಬಂಧಿಸಿದಂತೆ ಮೌಖಿಕ ಪರೀಕ್ಷೆಯ ಮೂಲಕ ಮಾನ್ಯ ಕುಲಪತಿಗಳು ದಿನಾಂಕ 15.12.2023 ರಂದು ಪಿಎಚ್.ಡಿ. ಪದವಿಯನ್ನು ಘೋಷಿಸಿರುತ್ತಾರೆ. ಕವಿತ ಅವರಿಗೆ ಕುಟುಂಬ ವರ್ಗ ಹಾಗೂ ಗ್ರಾಮದ ಮುಖ್ಯಸ್ಥರು ಅಭಿನಂದಿಸಿದ್ದಾರೆ.
ಹಂಪಿ ಪರಿಸರದ ಗಾರೆಶಿಲ್ಪಗಳು ಎಂಬ ನನ್ನ ಪಿಎಚ್.ಡಿ. ಅಧ್ಯಾಯನಕ್ಕೆ ಬಾಹ್ಯ ಪ್ರಾಂಶುಪಾಲರಾದ ಡಾ.ಆರ್. ಕವಿತ ಅವರು ಮಾರ್ಗದರ್ಶಕರಾಗಿದ್ದರು. ಈ ಮೂಲಕ ನನ್ನ ಅಧ್ಯಯನ ಪೂರ್ಣಗೊಳಿಸಿ ಪಿಎಚ್.ಡಿ. ಪದವಿಯನ್ನು ಪಡೆದಿರುವುದಾಗಿ ತಿಳಿಸಿದರು.