
ಕಾಂಗ್ರೆಸ್ 7 ಗ್ಯಾರಂಟಿ ಯೋಜನೆಗೆ ಚುನಾವಣಾ ಆಯೋಗದಿಂದ ನಿಷೇಧ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 5- ಕಾಂಗ್ರೆಸ್ ಕೇಂದ್ರ ಕಮಿಟಿಯಿಂದ ೭ಗ್ಯಾರಂಟಿ ಯೋಜನೆ ಕಾರ್ಡ ನಿಡುವದಕ್ಕೆ ಚುನಾವಣಾ ಆಯೋಗ ನಿಷೇಧವಿಧಿಸಿದೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಅವರು -ನಗರದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಮಾತನಾಡಿ ಕಾಂಗ್ರೇಸ ಪಕ್ಷ ೭ ಗ್ಯಾರಂಟಿ ಯೋಜನೆಗಳ ಕಾರ್ಡನ್ನು ಮತದಾರರಿಗೆ ನೀಡುವದರ ಮೂಲಕ ಆಮಿಷ ಒಡ್ಡಿದೆ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಪಕ್ಷದಿಂದ ಮಾಡಿದ ದೂರಿನ ಅನ್ವಯ ಚುನಾವಣಾ ಆಯೋಗ ೧೨೭ ಕಲಂ ಪ್ರಕರಣ (ಕೇಸು) ದಾಖಲಿಸಿದೆ. ಮೇ 2ರಂದು ಕಾಂಗ್ರೇಸ ಪಕ್ಷದ 7ಗ್ಯಾರಂಟಿಗಳ ಮೇಲೆ ಮೋಕದೋಮ್ಮೆ ಹೂಡಿ ಯಾವುದೇ ಕಾರಣಕ್ಕೂ ಕಾಂಗ್ರೇಸ ಪಕ್ಷ ಗ್ಯಾರಂಟಿ ಕಾರ್ಡನ್ನು ನಿಡಬಾರದೆಂದು ಆದೇಶ ನಿಡಿದೆ. ಇವೇಲ್ಲದರ ನಡುವೆ ಕಾಂಗ್ರೇಸ ಪಕ್ಷ ಗ್ಯಾರಂಟಿ ಕಾರ್ಡಗಳನ್ನು ನಿಡುತ್ತಿರುವುದು ಸರಿಯಲ್ಲ.
ಬೆಂಗಳೂರಿನಲ್ಲಿ ಬಿಜೆಪಿ ಪಕ್ಷದಿಂದ ಕೇಸ ದಾಖಲಿಸಲಾಗಿದೆ.
ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವಿನ ಗುಳಗಣ್ಣವರವರು ಜಿಲ್ಲಾಧಿಕಾರಿಗಳಿಗೆ ಕೇಸು ದಾಖಲಿಸಲಿದ್ದಾರೆ. ಚುನಾವಣಾ ಅಯೋಗ ನಿರ್ದೇಶನದ ಹಿನ್ನಲೆಯಲ್ಲಿ ಕೇಸು ದಾಖಲಿಸಲಾಗಿದೆ. ರಾಜ್ಯದಲ್ಲಿ 25ಸ್ಥಾನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಗಳಾಗಲಿದ್ದಾರೆ.
ಕೊಪ್ಪಳದಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ, ಬಳ್ಳಾರಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ,ಶ್ರೀರಾಮುಲು,ರಾಯಚೂರ ರಾಜಾ ಅಮರೇಶ ನಾಯಕ ಗೆಲ್ಲುವುದು ಖಚಿತವಾಗಿದೆ. ೧ಲಕ್ಷ ಅಧಿಕ ಮತಗಳ ಅಂತೆರದಲ್ಲಿ ಅಭ್ಯರ್ಥಿಗಳು ಜಯಶಾಲಿಗಳಾಗಲಿದ್ದಾರೆ ಎಂದರು.
ನಿಕಟ ಪೂರ್ವ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಈಗಾಗಲೇ ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷ ಭರ್ಜರಿಯಾಗಿ ಪ್ರಚಾರ ಮುಗಿಸಿದ್ದು.
ಮೂರನೇ ಅವಧಿಗೆ ನರೆಂದ್ರ ಮೋದಿ ಪ್ರಧಾನಮಂತ್ರಿಯಾಗುವುದು ಎಷ್ಠು ಖಚಿತವಾಗಿದಿಯೋ.ಅದರಂತೆ ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ/ಬಸವರಾಜ ಕ್ಯಾವಟರ ಗೆಲುವು ಖಚಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ಗಿರೇಗೌಡ, ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ನಗರ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಬಿಜೆಪಿ ಗ್ರಾಮಿಣ ಅಧ್ಯಕ್ಷ ಚನ್ನಪ್ಪ ಮಳಗಿ, ಬಿಜೆಪಿ ಜಿಲ್ಲಾ ನರಸಿಂಗರಾವ ಕುಲಕರ್ಣಿ, ಡಿಕೆ ಆಗೋಲಿ, ಮನೋಹರಗೌಡ ಹೇರೂರ, ಯಮನೂರ ಚೌಡ್ಕಿ, ನಾಗರಾಜ ಚಳಗೇರಿ, ವಿರೇಶ ಬಲಕುಂದಿ, ಪಂಪಣ್ಣ ನಾಯಕ, ವಿರುಪಾಕ್ಷಗೌಡ ಹೇರೂರ, ಚಂದ್ರು ಹಿರೂರ, ದುರಗಪ್ಪ ದಳಪತಿ, ಆನಂದಗೌಡ, ನಗರಸಭೆ ಸದಸ್ಯರುಗಳಾದ ನವಿನಮಾಲಿಪಾಟೀಲ, ಪರಶುರಾಮ ಮಡ್ಡೇರ ಮುಂತಾದವರು ಉಪಸ್ಥಿತರಿದ್ದರು.