
ಕೆ.ರಾಜಶೇಖರ್ ಹಿಟ್ನಾಳ್ ರಿಂದ ಪ್ರಚಾರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,25- ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ.ರಾಜಶೇಖರ್ ಹಿಟ್ನಾಳ್ ಅವರ ಚುನಾವಣಾ ಪ್ರಚಾರವನ್ನು ಯಲಬುರ್ಗಾದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಶಿವರಾಜ ತಂಗಡಗಿ ಅವರು ವಹಿಸಿಕೊಂಡಿದ್ದರು. ರಾಜಶೇಖರ್ ಅವರಿಗೆ ರಾಜಯೋಗ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದಾರೆ. ಈ ಸಾರಿ ಮತದಾರ ಪ್ರಭು ಅವರಿಗೆ ಆಶಿರ್ವಾದ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಸ್ಮಾರ್ಟಸಿಟಿ ಘೋಷಣೆಯೊಂದೆ ಆಗಿ ಹೊಯ್ತು, ಕಪ್ಪು ಹಣ ದೇಶಕ್ಕೆ ಬರಲಿಲ್ಲ, ರೈತರ ಸಾಲ ಮನ್ನಾ ಆಗಲಿಲ್ಲ, ಲಂಚಕ್ಕೆ ರಶೀದಿ ಕೊಟ್ಟ ಪಕ್ಷ ಇದ್ದರೆ ಅದು ಬಿಜೆಪಿ ಪಕ್ಷ ಎಂದು ಹರಿಹಾಯ್ದರು. ಬಿಜೆಪಿಯವರಿಗೆ ಸುಳ್ಳು ಹೇಳುವುದೊಂದೆ ಸಾಧನೆಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಹಲವಾರು ಡ್ಯಾಂ ನಿರ್ಮಾಣ ಮಾಡಿದೆ, ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದೆ, ರೈಲ್ವೇ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ, ಏರ್ ಪೋರ್ಟಗಳನ್ನು ನಿರ್ಮಿಸಿದೆ ದೇಶಕ್ಕೆ ಭದ್ರ ಬುನಾದಿ ಹಾಕಿದ್ದೆ ಕಾಂಗ್ರೆಸ್ ಎಂದು ತಮ್ಮ ಪಕ್ಷದ ಕೊಡುಗೆಗಳನ್ನು ಜನರಿಗೆ ತಿಳಿಸಿ, ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲು ಬಸವರಾಜ ರಾಯರಡ್ಡಿಯವರು ಕಾರ್ಯಕರ್ತರಿಗೆ ಕರೆ ನೀಡಿದರು.
ನಂತರ ಮಾತನಾಡಿದ ಕೆ.ರಾಜಶೇಖರ್ ಅವರು ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೆನೆ.ಕಾಂಗ್ರೈಸ್ ಹೇಳಿದ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ, ನಮ್ಮ ಸರಕಾರ ಜನಸಾಮಾನ್ಯರ ಪರ ಇದೆ. ಕಾಂಗ್ರೆಸ್ ಜನರಿಗೆ ಎಲ್ಲವನ್ನು ಕೊಟ್ಟಿದೆ, ಅಭಿವೃಧ್ದಿಗೆ ಮುನ್ನುಡಿ ಬರೆದಿದೆ ಆಗಾಗಿ ಈ ಸಾರಿ ನನಗೆ ಆಶಿರ್ವಾದ ನೀಡಿ ಎಂದು ಸಭೆ ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೈಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಎಂ.ಎ.ದೇಸಾಯಿ, ಹನಮಂತಗೌಡ ಚಂಡೂರ್, ವೀರನಗೌಡ ಬಳೂಟಗಿ, ರಾಮಣ್ಣ, ಸಾಲಭಾವಿ, ಸತ್ಯನಾರಾಣಪ್ಪ ಹರಪನಹಳ್ಳಿ ಬಿ.ಎಂ.ಶಿರೂರ್. ಕೆರೆಬಸಪ್ಪ ನಿಡಗುಂದಿ, ರಸೂಲ್ ಸಾಬ ದಮ್ಮೂರ್, ಯಂಕಣ್ಣ ಯರಾಶಿ, ಕೆರೆಬಸಪ್ಪ ನಿಡಗುಂದಿ, ರಾಘವೇಂದ್ರ ಆಚಾರ್ ಜೋಷಿ, ಶರಣಪ್ಪ ಗಾಂಜಿ, ಡಾ. ಶಿವರಡ್ಡಿ ದಾನರಡ್ಡಿ, ಸುದೀರ್ ಕೊರ್ಲಳ್ಳಿ, ಮಲ್ಲಿಕಾರ್ಜುನ್ ಜಕ್ಕಲಿ, ಸಂಗಮೇಶ್ ಗುತ್ತಿ ಎಂ.ಎಚ್ ಉಜ್ಜಮ್ಮನವರ್ ಮತ್ತಿತರಿದ್ದರು.