
ಕಾಂಗ್ರೆಸ್ ಬ್ಯಾನರ್ ನಲ್ಲಿ ಶ್ರೀನಾಥ್ – ಕರಿಯಣ್ಣ
ಅನ್ಸಾರಿ ಕಾರ್ಯಕತ್ರರು ಆಕ್ರೋಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 08- ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆ ನಡೆವ ಸ್ಥಳದಲ್ಲಿ ಕಾಂಗ್ರೆಸ್ ನಿಂದ ಹಾಕಿದ್ದ ಬ್ಯಾನರ್ ನಲ್ಲಿ ಎಚ್. ಆರ್. ಶ್ರೀನಾಥ ಹಾಗೂ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ ಫೋಟೊಕ್ಕೆ ಕತ್ತರಿ ಹಾಕಿದರು.
ಗಂಗಾವತಿ ಮಾಜಿ ಶಾಸಕ ಇಲ್ಬಾಲ್ ಅನ್ಸಾರಿ ಬೆಂಬಲಿಗರು, ಬ್ಯಾನರ್ ನಲ್ಲಿನ ಶ್ರೀನಾಥ ಹಾಗೂ ವಿಧಾನ ಪರಿಷತ ಸದಸ್ಯ ಕರಿಯಣ್ಣ ಸಂಗಟಿ ಫೋಟೊ ಹರಿದು ಆಕ್ರೋಶ ಹೊರ ಹಾಕಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀನಾಥ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಅನ್ಸಾರಿ ಸೋಲಿಗೆ ಕಾರಣ ಆಗಿದ್ದಾರೆ ಎಂದು ಆರೋಪಿಸಿದರು. ಕೆಲ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಬ್ಯಾನರ್ ಹರಿಯುವುದನ್ನು ತಡೆದರು.
ಸಂಗಟಿ, ಶ್ರೀನಾಥ ಫೋಟೋಗೆ ಮಸಿ; ಕಾಂಗ್ರೆಸ ಬ್ಯಾನರಲ್ಲಿ ದರಲ್ಲಿ ಕೆಆರ್ ಪಿಪಿ ಮುಖಂಡ, ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರ ಫೋಟೋ ಹಾಕಿಸಿದ್ದು ಯಾರು ಎಂಬ ಚರ್ಚೆ ಮುನ್ನಲೆಗೆ ಬಂದಿದೆ.
ಜಿಲ್ಲಾ ಕಾಂಗ್ರೆಸ್ ಘಟಕದ ಗಮನಕ್ಕಿಲ್ಲದೇ ಫೋಟೋ ಹೇಗೆ…? ಬಂತು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಅವರ ಬೆಂಬಲಿಗರು ಪುಲ್ ಗರಂ ಆಗಿದ್ದಾರೆ.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಕೊಪ್ಪಳ ಲೋಕಸಭೆ ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಬುಧವಾರ ಶಿವಶಾಂತವೀರ ಮಂಗಲ ಭವನದಲ್ಲಿ ಸಭೆ ನಡೆದಿದೆ.
ಸಚಿವರಿಗೆ ಶುಭ ಕೋರಿ ಹಾಕಿರುವ ಬ್ಯಾನರ್ನಲ್ಲಿ ಈ ಮೊದಲು ಕಾಂಗ್ರೆಸ್ನಲ್ಲಿದ್ದ ಕರಿಯಣ್ಣ ಸಂಗಟಿ ಫೋಟೋ ಸಹ ಬ್ಯಾನರನಲ್ಲಿ ಹಾಕಲಾಗಿದೆ. ಇವರ ಜತೆ ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರ ಫೋಟೋ ಸಹ ಇರುವುದು. ಇಕ್ಬಾಲ ಅನ್ಸಾರಿ ಬೆಂಬಗಲಿಗರ ಆಕ್ರೋಶಕ್ಕೆ ಕಾರಣ ವಾಗಿದೆ.
ಗೊಂದಲದ ಗೂಡು; ಸಚಿವ ಶಿವರಾಜ ತಂಗಡಗಿ ಕ್ಷೇತ್ರವಾರು ಸರದಿ ಬರುವಂತೆ ಮನವಿ ಮಾಡಿದರೂ ನೂಕಾಟ- ತಳ್ಳಾಟ ಮಾಡಿದರು.
ಕೊಪ್ಪಳ ಕ್ಷೇತ್ರದ ಕಾರ್ಯಕರ್ತರು, ರಾಜಶೇಖರ ಹಿಟ್ನಾಳ ಪರ ಘೋಷಣೆ ಕೂಗಿದರೆ, ಕುಷ್ಟಗಿ ಭಾಗದವರು ಅಮರೇಗೌಡ ಭಯ್ಯಾಪೂರ ಪರ ಘೋಷಣೆ ಕೂಗಿದರು. ಸಿಂಧನೂರು ಭಾಗದ ಕಾರ್ಯಕರ್ತರು ಬಸಮಗೌಡ ಬಾದರ್ಲಿ ಹೆಸರು ಹೇಳಿದಾಗ ಕೇಕೆ ಹಾಕಿದ್ದು ಕಂಡು ಬಂತು. ಕಾರ್ಯಕರ್ತರ ಪರ ವಿರೋದಕ್ಕೆ ವೀಕ್ಷಕರು ಸುಸ್ತಾದ ಘಟನೆ ಜರುಗಿತು.