WhatsApp Image 2024-04-25 at 6.45.50 PM

ಕಾಂಗ್ರೆಸ್ ರೈತರ ವಿರೋಧಿ ಸರಕಾರ : ಮಾಜಿ ಸಚಿವ ಹಾಲಪ್ಪ ಆಚಾರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,25- ಈ ಹಿಂದೆ ಕಾಂಗ್ರೆಸ್ ಪಕ್ಷದವರು 60 ವರ್ಷ ಆಡಳಿತ ಮಾಡಿದು ತಮ್ಮ ಕುಟುಂಬ ರಾಜಕಾರಣ ಮಾಡಿ. ಅತಿ ಹೆಚ್ಚು ಲಕ್ಷ ಲಕ್ಷ ಕೋಟಿ ಬ್ರಷ್ಟಚಾರ ಮಾಡಿ ದೇಶವನ್ನು ದಿವಾಳಿ ಮಾಡಿದವರು ಕಾಂಗ್ರೆಸ್ನವರು ದೇಶದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವದಿಲ್ಲ ಅವರು ವಿರೋಧ ಪಕ್ಷ ನಾಯಕರು ಸಹ ಆಗುವದಿಲ್ಲ. ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ವಜ್ರಬಂಡಿ ಹಿರೇ ಅರಳಿ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹಿರಂಗ ಪ್ರಚಾರ ಸಭೆ. ಲೋಕಸಭಾ ಅಭ್ಯರ್ಥಿ ಪರ ಮತಯಾಚನೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರಕಾರದಿಂದ ಸಣ್ಣ ಹಿಡುವಳಿ ರೈತರಿಗೆ ವರ್ಷಕ್ಕೆ,, 6 ಸಾವಿರ ಮತ್ತು ರಾಜ್ಯ ಬಿಜೆಪಿ ಸರಕಾರ ದಿಂದ 4 ಸಾವಿರ ರೂಪಾಯಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಬಿಜೆಪಿ ಪಕ್ಷ ರೈತರ ಹಿತ ಕಾಪಾಡಲಾಗಿತ್ತು ಆದರೆ ಕಾಂಗ್ರೆಸ್ ರಾಜ್ಯ ಸರಕಾರ ಈ ಯೋಜನೆ ನಿಲ್ಲಿಸಿದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ರೈತ ವಿರೋಧಿ ಸರಕಾರ ವಾಗಿದೆ ಎಂದರು.

ದೇಶದಲ್ಲಿ ನರೇಂದ್ರ ಮೋದಿಯವರು 10 ವಷ೯ದ ಸುಭದ್ರ ಆಡಳಿತ ನೋಡಿ ಇಡೀ ಪ್ರಪಂಚವೇ ನಮ್ಮ ಭಾರತ ದೇಶದ ಕಡೇ ತಿರುಗಿ ನೋಡುವಂತೆ ಮಾಡಿದ್ದಾರೆ.

ಮತ್ತೋಮೆ ಮೋದಿಯವರನ್ನು 3ನೇಯ ಬಾರಿಗೆ ದೇಶದ ಪ್ರಧಾನಿ ಮಾಡಬೇಕು ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ದೇಶದ ಭದ್ರತೆಗಾಗಿ ಬಲಪಡಿಸಲು ಮೋದಿಜೀ ಅವರ ಕೈ ಬಲಪಡಿಸಬೇಕು ನರೇಂದ್ರ ಮೋದಿಯವರು ನಮ್ಮ ದೇಶದ ಗೌರವವನ್ನು ಹಿಮಾಲಯ ಪರ್ವತಗಳ ಎತ್ತರಕ್ಕೆ ಏರಿಸಿದ್ದಾರೆ.

ಕಾಂಗ್ರೇಸ್ ನವರು ರೈತರಿಗೆ ಉಪಯೋಗವಾಗುವಂತ ಯಾವ ಯೋಜನೆಗಳನ್ನು ಜಾರಿಗೊಳಿಸಲಿಲ್ಲ ತಾಲೂಕಿನ ಯಾವುದೇ ಕೆರೆಗಳ ಜೀರ್ಣೋದ್ಧಾರ ಮಾಡಲಿಲ್ಲ. ಹಲವಾರು ವರ್ಷಗಳ ಕಾಲ ರಾಜಕಾರಣ ಮಾಡಿದರು ಕ್ಷೇತ್ರದ ಕೆರೆಗಳಿಗೆ ನೀರು ತರಲಾಗಲಿಲ್ಲ ನಿಮ್ಮ ಆಶೀರ್ವಾದದಿಂದ ನಾನು ಶಾಸಕನಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೆನೆ ಇದು ನಮ್ಮ ಬಿಜೆಪಿ ಪಕ್ಷ ಬದ್ದತೆ ನಾವೂ ಕೃಷ್ಣಾ,ಬಿ,ಸ್ಕೀಂ,ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದಾಗ ನೀವು ಇದು ಅಡಿಗಲ್ಲು ಅಲ್ಲ ಅದು ಅಡ್ಡಗಲ್ಲು ಎಂದು ಹೇಳಿದವರು ಯಲಬುರ್ಗಾ ಎತ್ತರ ಪ್ರದೇಶದಲ್ಲಿ ಇದೆ ಸತ್ಯ ಹರಿಶ್ಚಂದ್ರ ಬಂದರು ನೀರು ಬರುವದಿಲ್ಲ ಎಂದು ಹೇಳಿದವರು.

ಕಾಂಗ್ರೇಸ್ ನವರಿಗೆ ನಾಚೀಕೆ ಯಾಗಬೇಕು ನಾನು ಶಾಸಕರಾದ ಮೇಲೆ ಕೃಷ್ಣ ಯ ನೀರು ತಂದು ಕೆರೆಗಳಿಗೆ ನೀರು ತಂದು ಭೂ ತಾಯಿ ಒಡಲಿಗೆ ಹಾಕಿದ್ದೇನೆ ಕಾಂಗ್ರೇಸ್ ನವರ ಅಧಿಕಾರದ ಅವಧಿಯಲ್ಲಿ ತಾಲೂಕಿನ ಯಾವ ಕೆರೆಗಳು ಜೀರ್ಣೋದ್ಧಾರವಾಗಲಿಲ್ಲ ಕಾಂಗ್ರೇಸ್ ನವರು ರೈತರಿಗೆ ಅನುಕೂಲ ವಾಗುವಂತ ಕೆಲಸ ಏನು ಮಾಡಲಿಲ್ಲ ದೇಶದ ಅಭಿವೃದ್ಧಿ ಗೋಸ್ಕರ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ದಕ್ಷತೆಯನ್ನು ನೋಡಿ ಅವರ ಕೈ ಬಲಪಡಿಸಲು ಬಿಜೆಪಿ ಪಕ್ಷದ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ನಂತರ ಸಿ. ಎಚ್ ಪೋಲೀಸ್ ಪಾಟೀಲ.ಶಿವಶಂಕರರಾವ ದೇಸಾಯಿ. ಅಯ್ಯನಗೌಡ ಕೆಂಚಮ್ಮನವರು. ಮಲ್ಲನಗೌಡ ಕೋನನಗೌಡ್ರ ಅವರು ಮಾತನಾಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಕಮಲದ ಗುರುತಿಗೆ ಮತ ಹಾಕುವ ಮೂಲಕ ಕೂಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಅವರು ಸಾಕಷ್ಟು ಅಭಿವೃದ್ಧಿ ಮಾಡಿ ಕೃಷ್ಣ ಯೇ ನೀರು ಭಗೀರಥ ವಾಗಿದ್ದಾರೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಕ್ಷ ಪ್ರಮಾಣಿಕ ಉತ್ತಮ ಆಡಳಿತ ನೋಡಿ ಬಿಜೆಪಿ ಪಕ್ಷಕ್ಕೆ ಮತ ಕೊಡಬೇಕು ದೇಶ. ಸುಭದ್ರವಾಗಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕಾದರೆ ಎಲ್ಲರೂ ಬಿಜೆಪಿಗೆ ಮತ ಹಾಕುವ ಮೂಲಕ ಮೋದಿಯವರು ಕೈ ಬಲಪಡಿಸಿ ಎಂದು ಹೇಳಿದರು.

ಕಾಂಗ್ರೆಸ್ ನವರು ದೇಶದ ಸುಳ್ಳು ಗ್ಯಾರಂಟಿ ಯೋಜನಗಳನ್ನು ನಂಬ ಬೇಡರಿ ಎಂದು ಹೇಳಿದರು.

ಲೋಕಸಭಾ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಪರ ಮತಯಾಚನೆ ಮಾಡಿ ಮಾತನಾಡಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕು ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಗೆಲುವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಶರಣಪ್ಪ ಗುಂಗಾಡಿ ವೀರಣ್ಣ ಹುಬ್ಬಳ್ಳಿ. ರತ್ನನ್ ದೇಸಾಯಿ ಶಿವಕುಮಾರ ನಾಗಲಾಪೂರಮಠ. ಶಿವಪ್ಪ ವಾದಿ. ಫಕೀರಪ್ಪ ತಳವಾರ. ಸಿದ್ಧು ಮಣ್ಣಿನವರು ಶರಣಪ್ಪಗೌಡ್ರ ಶರಣಪ್ಪ ಹೂಸಕೇರಿ ಸೋಮನಗೌಡ. ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!