WhatsApp Image 2024-03-01 at 4.55.15 PM

ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ : ಸೋಮಶೇಖರ್ ರೆಡ್ಡಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,1- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಹಿಡಿದು 10 ತಿಂಗಳ ಕಳೆದರೂ ಜನರಿಗೆ ಉತ್ತಮ ಪಾಲನೆ ನೀಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ರಾಜ್ಯದಲ್ಲಿ ಬರಗಾಲ ಆವರಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ಸರ್ಕಾರ ರೈತರು ಸರ್ಕಾರ ಕೊಡುವ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

5 ಆಚರಣೆಗೆ ಯೋಗ್ಯ ವಾಗದ ಗ್ಯಾರೆಂಟಿಗಳನ್ನು ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಅದಕ್ಕಾಗಿ ಇತರ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ವಿನೊಗಿಸುತ್ತಿದ್ದಾರೆ ಎಂದು ಆರಂಭಿಸಿದರು. ಎಲ್ಲೋ ಅಂಬೇಡ್ಕರ್ ಅವರಿಗೆ ಸರಿಯಾದ ರೀತಿ ಗೌರವ ನಾವು ಕಾಂಗ್ರೆಸ್ ಪಕ್ಷ ಕೊಟ್ಟಿಲ್ಲ ಆದರೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ ಎಂದರು.

ಬಳ್ಳಾರಿಯ ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್ ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದವರ ವಿರುದ್ಧ ಕ್ರಮ ಕೈಗೊಳ್ಳದೆ ಎಸ್ ಎಫ್ ಎಲ್ ರಿಪೋರ್ಟಿಗೆ ಕಾದು ಕುಳಿತಿರುವುದು ಸರ್ಕಾರದ ಕಿವುಡುತನವಾಗಿದೆ ಎಂದರು. ಹೆಣ್ಣು ಹವಾಯಿಕರವಾಗಿ ಜಾತಿ ಗೆಳತಿ ಮಾಡಿದ್ದಾರೆ ವರದಿ ಜಾತಿಗಣತಿಯನ್ನು ಯಾವ ಆಧಾರ ಮೇಲೆ ಮಾಡಿದ್ದಾರೆ ಎಂದು ಬಹಿರಂಗ ಪಡಿಸಲಿ ಎಂದು ಸವಾಲು ಬೀಸಿದರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂತಹ ಪಕ್ಷಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.

ಬಿಜೆಪಿ ಒತ್ತರಾ ಡಾಕ್ಟರ್ ಬಿ ಕೆ ಸುಂದರ್ ಮುಂದುವರಿಸುತ್ತಾ ದೇಶದ ಪುರ ಅಭಿವೃದ್ಧಿಗೆ ಬಿಜೆಪಿ ಪಾಲನೆಯಲ್ಲಿ ಹಾದಿಯಾಗಿದೆ ಎಂದರು. ದೇಶದ ಜನತೆ ನರೇಂದ್ರ ಮೋದಿ ನಾಯಕತ್ವವನ್ನು ಬಿಜೆಪಿ ಪಾಲನೆಯನ್ನು ಮುಂದು ಐದು ವರ್ಷಗಳು ನಡೆಸಲು ತಮಗೆ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳಲ್ಲಿ ಗೆಲ್ಲಲಿ ಇದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ ರಾಮಲಿಂಗಪ್ಪ, ಗಾಳಿ ಶಂಕರಪ್ಪ ಹೆಚ್ಚು ಓಬಳೇಶ್ ಬಿಜೆಪಿ ಸಹವಕ್ತರು ಪಾಟೀಲ್ ಬಳ್ಳಾರಿ ಜಿಲ್ಲಾ ಮಾಧ್ಯಮ ಸಂಚಾಲಕರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉಡೆದ ಸುರೇಶ್,, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಗೌಡ, ವಿರುಪಾಕ್ಷಿ ಗೌಡ, ರಾಜೀವ್ ತೊಗರಿ ಗಳ ಜೊತೆಗೆ ಹಲವಾರು ಬಿಜೆಪಿ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!