WhatsApp Image 2024-03-07 at 6.44.24 PM

ಕಾವ್ಯದಿಂದ ಭಾವನೆಯ ಅಭಿವ್ಯಕ್ತಿ : ಡಾ.ಕೆ.ಬಿ.ಬ್ಯಾಳಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,7- ಕವಿಯಾದವನಿಗೆ ಸಾಮಾಜಿಕ ಜವಾಬ್ದಾರಿ ತುಂಬಾ ಇರುತ್ತದೆ ಆತ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಲಿಕ್ಕೆ ಕಾವ್ಯ ಸಹಕಾರಿ ಆಗಬಲ್ಲದು ಎಂದು ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಹೇಳಿದರು.

ಪಟ್ಟಣದ ಎಸ್.ಎ. ನಿಂಗೋಜಿ ಬಿ.ಇಡಿ.ಕಾಲೇಜಿನಲ್ಲಿ ಕರಮುಡಿಯ ಲಲಿತಾ ಹಾಗೂ ಕಾಲಕಾಲೇಶ್ವರ ಪ್ರಕಾಶನದ ಅಡಿಯಲ್ಲಿ ವೀರಪ್ಪ ನಿಂಗೋಜಿ ರವರ ಕರವೀರನ ರುಬಾಯಿಗಳು ಹಾಗೂ ಬಸವರಾಜ ರಾಟಿ ರವರ ನೀ ಮೌನಿಯಾದಗ ಕವನ ಸಂಕನ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಒಳ್ಳೆಯ ಲೇಖಕರು ˌ ನ್ಯಾಯಾಧೀಶರುˌ ಕಲಾವಿದರುˌ ಸಾಹಿತಿಗಳು ˌ ಪಂಡಿತರು ಹುಟ್ಟಿಬೆಳೆದ ಈ ನಾಡು ರಾಜ್ಯದಲ್ಲಿಯೇ ಗಮನ ಸೆಳೆದಿದ್ದಾರೆ. ಮನಸ್ಸನ್ನು ಸ್ಥಿಮೀತ ಗೋಳಿಸಿಕೊಂಡು ಅಧ್ಯಯನಶೀಲರಾದಗ ಒಬ್ಬ ಶ್ರೇಷ್ಠ ಸಾಹಿತಿ ಅಗಬಲ್ಲ ಎಂದರು.

ನಿಂಗೋಜಿ ರವರು ಹಾಗೂ ರಾಟಿ ರವರು ತಮ್ಮದೆ ಆದ ವೈಶಿಷ್ಟತೆಯಿಂದ ಸಾಹಿತ್ಯಲೋಕದಲ್ಲಿ ಗಮನ ಸೆಳೆದಿದ್ದಾರೆ. ಅವರಿಂದ ಇನ್ನು ವೈವಿಧ್ಯಮಯವಾದ ಕ್ರತಿಗಳು ಹೊರಹೊಮ್ಮಲಿ ಎಂದು ಆಶಿಸಿದರು.

ಕರವೀರನ ರುಬಾಯಿಗಳು ಕ್ರತಿಯನ್ನು ಲೋಕಾರ್ಪಣೆಗೋಳಿಸಿ ಸಾಹಿತಿ ಅನುಸೂಯಾ ಜಹಾಗೀರದಾರ ಮಾತನಾಡಿ ಕ್ರಮಬಧ್ಧವಾಗಿ ರುಬಾಯಿಗಳನ್ನು ರಚಿಸಿ ಅನೇಕ ವೈವಿಧ್ಯಮಯವಾದ ವಿಷಯಗಳ ಬಗ್ಗೆ ರಸವತ್ತಾಗಿ ಬರೆಯುವ ಮೂಲಕ ನಿಂಗೋಜಿರವರು ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ರಸವತ್ತಾಗಿ ಬಿಂಬಿಸಿದ್ದಾರೆ ಎಂದರು ರುಬಾಯಿಯ 1, 2, 4 ಸಾಲುಗಳು ಶರೀರವಾಗಿದ್ದರೆ 3 ನೇ ಸಾಲು ಆತ್ಮವಾಗಿರುತ್ತದೆ ಎಂದರು ನಿಯಮ ಪರಿಪಾಲನೆ ಮಾಡುವ ಮೂಲಕ ರುಬಾಯಿಯ ಛಂದಸ್ಸು ಹೆಚ್ಚಿಸಿದೆ ಎಂದರು.

ಬಸವರಾಜ ರಾಟಿ ರವರ “ನೀ ಮೌನಿಯಾದಾಗ..” ಕ್ರತಿಯನ್ನು ಲೋಕಾರ್ಪಣೆ ಗೋಳಿಸಿ ಸಾಹಿತಿ ಅಕ್ಬರ್ ಕಾಲಿಮಿರ್ಚಿ ಮಾತನಾಡಿ ಅನೇಕ ಜೀವಪರ ಕವಿತೆಗಳು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಲ್ಲಿ ಯಶಕಂಡಿವೆ ಎಂದರು ಮನದಾಳದಲ್ಲಿ ಇದ್ದ ವಿಷಯವನ್ನು ಕಾವ್ಯ ಪ್ರತಿಪಾದಿಸುವಲ್ಲಿ ಕೌಶಲ್ಯ ಬೇಕಾಗುತ್ತದೆ ಎಂದರು.

ಸಾಹಿತಿ ವೀರಣ್ಣ ವಾಲಿ, ವೈ.ಜಿ.ಪಾಟೀಲ, ವಿ.ಎಸ್.ಬೆಣಕಲ್ಲ , ಅಶೋಕ ಮಾಲಿಪಾಟೀಲ, ಶೇಖರಗೌಡ ಉಳ್ಳಾಗಡ್ಡಿ, ಮುತ್ತಣ್ಣ ಬಲಕುಂದಿ, ಭೀಮಪ್ಪ ಹವಳಿ, ಶಿವಮೂರ್ತಿ ಇಟಗಿ, ಬಸವರಾಜ ರಾಟಿ, ಬಸವರಾಜ ಕೊಂಡಗುರಿ ಇನ್ನೂ ಅನೇಕರು ಮಾತನಾಡಿದರು.

ಎಸ್.ಎ.ನಿಂಗೋಜಿ, ಹೆಚ್.ವೀರಬಧ್ರಪ್ಪ, ಶರಣಪ್ಪ ಮೇಳಿ, ರಾಜಶೇಖರ ನಿಂಗೋಜಿ,ಕರಮುಡಿ ಗ್ರಾ.ಪಂ ಅಧ್ಯಕ್ಷ ಕಲ್ಲಿನಾಥ್ ಲಿಂಗಣ್ಣನವರ, ವೀರಪ್ಪ ನಿಂಗೋಜಿ ಇನ್ನೀತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಶಾಂತ ನಿರೂಪಿಸಿದರು ಮಲ್ಲನಗೌದ ಮಾಸಗಟ್ಟಿ ಸ್ವಾಗತಿಸಿದರು ಸ್ವಾತಿ ಪ್ರಾರ್ಥಿಸಿದರು ಅಂದಪ್ಪ ಹಾಳಕೇರಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!