ಕಿರುಕುಳ ಯುವತಿ ಆತ್ಮಹತ್ಯೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ತಾಲೂಕಿನ ಹಲವಾಲಗಿ ಗ್ರಾಮದಲ್ಲಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲವಾಲಗಿ ಗ್ರಾಮದ ಶಾಂತಮ್ಮ(21) ಆತ್ಮಹತ್ಯೆಗೆ ಶರಣಾದ ಯುವತಿ. ಅದೇ ಗ್ರಾಮದ ಭೀಮಪ್ಪ ದೇವಪ್ಪ ಹೊರಪೇಟಿ ಎಂಬ
ಯುವಕನೋರ್ವ ‘ನಾನು ನಿನ್ಮ ಪ್ರೀತಿಸುತ್ತೇನೆ, ಮದುವೆ ಮಾಡಿಕೋ’ ಎಂದು ಯುವತಿಗೆ ಕಿರುಕುಳ ನೀಡಿದ್ದಾನೆ.
ಈ ರೀತಿ ಮಾಡುವುದು ಸರಿಯಲ್ಲವೆಂದು ಗ್ರಾಮದ ಹಿರಿಯರು ಸೇರಿ ಬುದ್ದಿವಾದ ಹೇಳಿದ್ದಾರೆ. ಆದರೂ ಸಹ ಯುವಕ ಯುವತಿಗೆ ಜೀವ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ದಾಖಲಾಗಿದೆ.
ಕಳೆದ ಜ.8ರಂದು ಯುವತಿ ಮನೆಯವರೆಲ್ಲ ಹೊಲಕ್ಕೆ ಹೋದ ಸಂದರ್ಭದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿಗೆ ಬೇರೊಬ್ಬ ಯುವಕನ ಜತೆ ಮದುವೆ ನಿಶ್ಚಿತವಾಗಿತ್ತು. ಯುವಕನ ಕುಟುಂಬಸ್ಥರ ವಿರುದ್ಧ ಅಳವಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.