IMG-20231104-WA0023

ಕುಕನೂರ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

ಕರುನಾಡ ಬೆಳಗು ಸುದ್ದಿ

ಕುಕನೂರು 04 – ಪಟ್ಟಣದಲ್ಲಿ ಇಟರ್ನರಿ ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯದ ಉದ್ಘಾಟನಾ ಕುಕನೂರು ಪಟ್ಟಣದ ಹಳೆಯ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾ ಪ್ರಸನ್ನ ಬಿ ವಾರಳೆ ಅವರು ಉದ್ಘಾಟಿಸಿದರು. ಕರ್ನಾಟಕ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ. ವಿ. ಶ್ರೀ ಶಾನಂದ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ. ಹಂಚಟೆ, ಸಂಜೀವ್ ಕುಮಾರ್, ಸಂಸದರಾದ ಕರಡಿ ಸಂಗಣ್ಣ ನ್ಯಾಯಾಲಯದ ರಿಜಿಸ್ಟರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾಧಿಕಾರಿಗಳಾದ ನಲೀನ್ ಅತುಲ್, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಚಂದ್ರಶೇಖರ್. ಸಿ.ಬಾರ್ ಅಸೋಸಿಯೇಶನ್ ಯಲಬುರ್ಗಾದ ಜನರಲ್ ಸೀಕ್ರೆಟರಿ ಈರಣ್ಣ ಕೊಲ್ಲೂರ್, ಹಾಗೂ ಕುಕನೂರು ತಹಸಿಲ್ದಾರ್ ಹೆಚ್ ಪ್ರಾಣೇಶ್, ಪಪಂ ಪಂಚಾಯಿತಿ ಮುಖ್ಯ ಅಧಿಕಾರಿ ಸುಬ್ರಮಣ್ಯ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಹೇಮಂತ್ ರಾಜ್ ಹಾಗೂ ಬಾರ್ ಅಸೋಸಿಯೇಶನ್, ಯಲಬುರ್ಗಾದ ಎಕ್ಸಿಕ್ಯೂಟಿವ್ ಕಮಿಟಿ ಮರ್ಸ ಹಾಗೂ ಎಸ್.ಎಸ್. ಮಾದಿನೂರು, ಎಸ್. ಜಿ. ಅಂಗಡಿ, ಪಿ. ಬಿ. ಕೋಳೂರು, ಬಸವರಾಜ ಜಂಗ್ಲಿ, ರಮೇಶ್ ಗಜಕೋಶ, ರಾಜಶೇಖರ್ ಹಳ್ಳಿ, ಸಿ.ಪಿ. ನಿಂಗೋಜಿ, ಎಸ್.ಜಿ. ಗದಗ್ ಪಿಆರ್ ಹಿರೇಮಠ, ಆರ್. ಜಿ. ಕುಷ್ಟಗಿ, ಅಕ್ಕಮಹಾದೇವಿ ಪಾಟೀಲ್, ಎಮ್ . ಎಸ್ ಸವಳಂಗಿ ಮಠ, ವಿಜಯಲಕ್ಷ್ಮಿ ನವಲಗುಂದ, ಹಾಗೂ ಕೊಪ್ಪಳ ಕುಕನೂರು, ಯಲಬುರ್ಗಾ ನ್ಯಾಯಾಲಯದ ನ್ಯಾಯಾಧೀಶರು ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!