11

 ಶಿಕ್ಷಣ ದಿಂದ ಸಮರ್ಗ ಅಭಿವೃದ್ಧಿ -ಸುಮಿತ್ರಾ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದೆ. ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದ್ದು, ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಎಂದು ಇನ್ನರ್ ವಿಲ್ ಕ್ಲಬ್ ಜಿಲ್ಲಾ ಅಧ್ಯಕ್ಷರಾದ ಸುಮಿತ್ರಾ ರಾಜೇಶ ಅವರು ಹೇಳಿದರು.
ಅವರು ತಾಲ್ಲೂಕಿನ ಕುಟಗನಹಳ್ಳಿ ಗ್ರಾಮದ ಶಾಲೆಯಲ್ಲಿ ಕೊಪ್ಪಳ ಇನ್ನರ್ ವಿಲ್ ಕ್ಲಬ್ ವತಿಯಿಂದ ನಲಿ-ಕಲಿ ತರಗತಿಗೆ ಪೇಂಟಿಂಗ್ ಮಾಡಿಸಿದ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು, ಅವರ ಭವಿಷ್ಯ ಉಜ್ವಲಗೊಳಿಸಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅತ್ಯವಶ್ಯಕವಾಗಿದೆ. ಮಕ್ಕಳಿಗೆ ಆಟೋಪಕರಣ, ಪಿಟೋಪಕರಣ, ಆಧುನಿಕ ಶಿಕ್ಷಣ ಕೊಡಿಸಲು ನಮ್ಮ ಇನ್ನರ್ ವಿಲ್ ಕ್ಲಬ್ ಸಂಸ್ಥೆ ಶ್ರಮಿಸುತ್ತಿದೆ. ವಿದ್ಯರ‍್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಅಭ್ಯಾಸ ಮಾಡಿ ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ಇನ್ನರ್ ವಿಲ್ ಕ್ಲಬ್ ಜಿಲ್ಲಾ ಅಧ್ಯಕ್ಷರಾದ ಸುಮಿತ್ರಾ ರಾಜೇಶ ಅವರು ಸಲಹೆ ನೀಡಿದರು.
ಅದೇ ರೀತಿ ಕೊಪ್ಪಳ ನಗರದ ದೇವರಾಜ ಅರಸ ರ‍್ಕಾರಿ ಶಾಲೆಗೆ ೨೫ ಡಿಸ್ಕ್, ೧ ಕಂಪ್ಯೂಟರ್ ಮತ್ತೊಂದು ಸೌಂಡ್ ಮೈಕ್ ಸಿಸ್ಟಮ್ ಶಾಲೆಗೆ ದೇಣಿಗೆ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ವಿಜಯಲಕ್ಷ್ಮೀ ಹಂಚಾಟೆ ಅವರು ವಹಿಸಿ, ಮಾತನಾಡಿ, ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ವಿಶೇಷ ಕಾಳಜಿ ತೋರಿ, ಕೊಪ್ಪಳಕ್ಕೆ ಪ್ರವಾಸ ಹಮ್ಮಿಕೊಂಡಿರುವುದು ಮತ್ತು ನಮ್ಮ ಕ್ಲಬ್ ಕರ‍್ಯಚಟುವಟಿಕೆಗಳನ್ನು ವೀಕ್ಷಿಸಿದ್ದು, ಸಂತಸವನ್ನುಂಟು ಮಾಡಿದೆ ಎಂದರು.
ಕರ‍್ಯಕ್ರಮದಲ್ಲಿ ಕ್ಲಬ್ ನ ಜಿಲ್ಲಾ ಸಂಪಾದಕರಾದ ಪರ‍್ವತಿ ಪಲೋಟಿ, ಹಿರಿಯ ವೈದ್ಯೆ ಡಾ. ರಾಧಾ ಕುಲರ‍್ಣಿ, ಕ್ಲಬ್ ನ ಉಪಾಧ್ಯಕ್ಷೆ ಉಮಾ ತಮರಳ್ಳಿ, ಕರ‍್ಯರ‍್ಶಿ ಸವಿತಾ ಸವಡಿ, ಖಜಾಂಚಿ ಅನಿತಾ ಬಜಾರಮಠ, ಐ.ಎಸ್.ಓ ಪದ್ಮಾ ವಿರೇಶ, ಸಂಪಾದಕಿ ಮಮತಾ ಶೆಟ್ಟರ್ ಸೇರಿದಂತೆ ಡಾ. ಕಸ್ತೂರಿ, ಕೋಮಲಾ ಕುದರಿಮೋತಿ, ಸಾವಿತ್ರಿ ಮುಜುಮದಾರ ಅನೇಕರು ಪಾಲ್ಗೊಂಡಿದ್ದು, ಕ್ಲಬ್ ನ ಸದಸ್ಯೆ ಶರಣಮ್ಮ ಪಾಟೀಲ ಪ್ರರ‍್ಥನೆ ಗೈದರೆ, ಪ್ರತಿಮಾ ಪಟ್ಟಣಶೆಟ್ಟಿ ಕರ‍್ಯಕ್ರಮ ನಿರೂಪಿಸಿದರು. ಅನೇಕ ಜನ ಮಹಿಳೆಯರು ಪಾಲ್ಗೊಂಡಿದ್ದರು.ಐ.ಎಸ್.ಓ ಪದ್ಮಾ ವಿರೇಶ ಅವರು ೧೦೦ ಧ್ವಜ ವಿನಿಮಯ ಮಾಡಿದ್ದಕ್ಕೆ ಕರ‍್ಯಕ್ರಮದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!