
ಕುಷ್ಟಗಿ ಹುಚ್ಚನಾಯಿ ದಾಳಿ ಹಲವರಿಗೆ ಗಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,14- ಜಿಲ್ಲೆಯ ಕುಷ್ಟಗಿಯಲ್ಲಿ ಹಲವಾರು ಜನರ ಮೇಲೆ ಹುಚ್ಚು ನಾಯಿ ಕಡೆದು ಗಾಯಗೊಳಿಸಿರಯವ ಘಟನೆ ಜರುಗುದೆ.
ನಗರದಲ್ಲಿ ಬುಧವಾರ ಸಂಜೆ ವೇಳೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ ಎನ್ನಲಾಗಿದೆ.ಗಾಯಗೊಂಡವರಲ್ಲಿ ಸುಮಾರು ಏಳು ವರ್ಷದ ಗಂಡು ಮಗುವಿನ ಕೆನ್ನೆಯ ಭಾಗ ಕಚ್ಚಿದೆ, ಮಹಿಳೆಯ ತೊಡೆಹಿಂದಿನ ಭಾಗ ಮತ್ತು ಮಹಿಳೆಯ ಮೋಣಕಾಲು ಕೈ ಭಾಗದಲ್ಲಿ, ಓರ್ವನ ಕಾಲು ಕೈಗಳು ಸೇರಿದಂತೆ ಹತ್ತಾರು ಹೆಚ್ಚು ಜನರ ಮೇಲೆ ದಾಳಿ ನಡೆಸಿ ರಕ್ತಗಾಯಗೊಳಿಸಿದ್ದು ಜನರು ಭಯ ಬಿತಿಗೊಳಿಸಿದೆ. ಹುಚ್ಚು ನಾಯಿಯನ್ನು ಜನತೆ ಅಟ್ಟಿಸಿಕೊಂಡು ಹೋಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಕುಷ್ಟಗಿ ಪಟ್ಟಣದ ಗೌಡರುಣಿ, ಇಂದಿರಾ ನಗರ, ಭೋವಿ ಓಣಿ, ಚೆಲುವಾದಿ ಓಣಿ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಹುಚ್ಚನಾಯಿ ದಾಳಿ ಮಾಡಿ ದೇಹದ ಸಿಕ್ಕ ಸಿಕ್ಕ ಜಾಗದಲ್ಲಿ ಕಚ್ಚಿ ರಕ್ತಗಾಯ ಮಾಡಿದೆ.
ಹುಚ್ಚುನಾಯಿ ಕೆವಲ ಮನುಷ್ಯರಷ್ಟೇ ಅಲ್ಲಾ ಆರೋಗ್ಯವಂತ ನಾಯಿಗಳ ಮೇಲೆ ಹುಚ್ಚು ನಾಯಿ ಕಚ್ಚಿರುವ ಶಂಖೆ ವ್ಯಕ್ತವಾಗಿದ್ದು, ಆರೋಗ್ಯವಂತ ನಾಯಿಗಳು ಸಹ ಹುಚ್ಚು ಏರಿ ಮನುಷ್ಯರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಟ್ಟಣದ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಅನಾಹುತ ಆಗಿದ್ದರು ಸಹ ಪುರಸಭೆಯ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲಾ ಎಂದು ನಗರದ ಜನತೆ ಹಿಡಿ ಶಾಪ ಹಾಕಿದ್ದಾರೆ.