
ಕೆ.ಆರ್.ಎಸ್.ಪಕ್ಷದ ವತಿಯಿಂದ “ಕರ್ನಾಟಕಕ್ಕಾಗಿ ನಾವು” ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ
ಕರುನಾಡ ಬೆಳಗು ಸುದ್ದಿ
ವಿಜಯನಗರ,25- ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಿ, ಒಂದೆರಡು ತಿಂಗಳಿನಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಲೋಕಸಭಾ ಕ್ಷೇತಗಳಲ್ಲಿಯೂ KRS ಪಕ್ಷವು ಸರ್ಧಿಸಲಿದೆ. ಏಕೈಕ ಸ್ವಚ್ಚ ಮತ್ತು ಪ್ರಾಮಾಣಿಕ ಪಕ್ಷವಾದ ಕೆ.ಆರ್.ಎಸ್.ಪಕ್ಷವನ್ನು ಬೆಂಬಲಿಸುವಂತೆ ಜನರನ್ನು ಕೋರಲು ಇದೇ ಫೆ.19 ರಿಂದ ಮಾ.2 ರವರೆಗೆ “ಕರ್ನಾಟಕಕ್ಕಾಗಿ ನಾವು” ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪ.ಜಾ.ಘಟಕದ ತಾಲೂಕು ಅಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದರು.
ನಗರದ ಚರ್ಚ್ ಕಾಂಪ್ಲೆಕ್ಸ್ ನ ಕರ್ನಾಟಕ ಪತ್ರಕರ್ತರ ಸಂಘದ ಕಚೇರಿಯಲ್ಲಿ ಈ ಕುರಿತು ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿ ಫೆ.19 ರಂದು ಈ ಜಾಥಾವು ಬೆಂಗಳೂರು ಗ್ರಾಮಾಂತರ ಜಿಲೆಯ ದೇವನಹಳ್ಳಿಯಲ್ಲಿ ಆರಂಭವಾಗಿದ್ದು ಚಿಕ್ಕ ಬಳ್ಳಾಪುರ ಕೋಲಾರ, ಬೆಂಗಳೂರು ನಗರ ಜಿಲ್ಲೆ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಮಂಗಳೂರು, ಉಡುಪಿ, ಕಾರವಾರ, ಧಾರವಾಡ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ ಹಾವೇರಿ ದಾವಣಗೆರೆ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಮಾರ್ಗವಾಗಿ ಸಾಗಿ ಮಾರ್ಚ 2 ರಂದು ನೆಲಮಂಗಲ ತಲುಪಿ, ಅಲ್ಲಿ , ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ.
27 ಕ್ಕೆ ಬೈಕ್ ಜಾಥವು ಹೊಸಪೇಟೆಗೆ ಆಗಮಿಸಲಿದ್ದು, ಅಂದು ಸಂಜೆ 6 ಗಂಟೆಗೆ ತಾಲೂಕು ಕಚೇರಿ ಮುಂಭಾಗದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣರೆಡ್ಡಿ, ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಪ್ರ.ಕಾರ್ಯದರ್ಶಿ ದೀಪಕ್ ಸಿ.ಎಂ, ಪ್ರಭು ಜಾಣಗೆರೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಬೈಕ್ ಜಾಥವು ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಿ ಮಾ.2 ನೇ ತಾರೀಖಿಗೆ ನೆಲಮಂಗಲದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.
ರೈತ ಘಟಕದ ಜಿಲ್ಲಾಧ್ಯಕ್ಷ ಛಲವಾದಿ ಆನಂದ ಮಾತನಾಡಿ, ಅಧಿಕಾರಕ್ಕೆ ಜೆಸಿಬಿ ಪಕ್ಷಗಳು ಕಚ್ಚಾಟದಲ್ಲಿ ತೊಡಗಿವೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧಿಕಾರದಲ್ಲಿರುವವರು ಚಕಾರವೆತ್ತುತ್ತಿಲ್ಲ.ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಕಾರ್ಖಾನೆಗಳಿಗೆ ಮಾತ್ರ ನೀರು ನಿರಂತರವಾಗಿ ಹರಿಯುತ್ತಿದೆ. ನಗರದಲ್ಲಿ ಮೂಲಸೌಕರ್ಯ ಕೊರತೆ ಇದ್ದರೂ ಜನಪ್ರತಿನಿಧಿಗಳು ಏನು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ನಜೀರ್ ಶೇಖ್ ಮಾತನಾಡಿ, ನಗರಸಭೆಯಲ್ಲಿ ಫಾರಂ.3 ಗಾಗಿ ಅರ್ಜಿ ಕೊಟ್ಟು ನಾಲ್ಕೈದು ತಿಂಗಳು ಕಳೆದರೂ ಫಾರಂ.3 ಸಿಗುತ್ತಿಲ್ಲ. ತೋರಿಕೆಗಾಗಿ ಜನರ ಮುಂದೆ ಜಿಲ್ಲಾಧಿಕಾರಿಗಳ ಎದುರಿನಲ್ಲಿ 10 ದಿನ ಫಾರಂ.3 ಸರಿಯಾಗಿ ಕೊಟ್ಟರು. ಆಮೇಲೆ ಈಗ ಯಥಾಸ್ಥಿತಿ ಮುಂದುವರೆದಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಮಂಜುನಾಥ ಟಿ, ಕಣ್ಣಿ ಶಿವರಾಮಪ್ಪ, ವೀರೇಂದ್ರ, ಎಂ.ವೀರಭದ್ರಯ್ಯ, ಜಿಲಾನ್, ಎಚ್.ಲೋಕೇಶ, ಇದ್ದರು.