
ನನ್ನ ಸೋಲಿಗೆ ಕಾರಣರಾದರ ಹೆಸರು ಶೀಘ್ರ ಬಹಿರಂಗ ಪಡೆಸುವೆ – ಇಕ್ಬಾಲ್ ಅನ್ಸಾರಿ
ಮುಸ್ಲಿಂ ಸಮಾಜದ ಮನೆಮನೆಗೆ ವಿಷಯ ತಲುಪಿಸುತ್ತೇನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಕೊಪ್ಪಳ ಮತ್ತು ಗಂಗಾವತಿ ಕಾಂಗ್ರೆಸ್ ನಡುವಿನ ಭಿನ್ನಮತ ರವಿವಾರ ದೊಡ್ಡಮಟ್ಟದಲ್ಲಿ ಸ್ಫೋಟಗೊಂಡಿದ್ದು ಸ್ವತಃ ಇಕ್ಬಾಲ್ ಅನ್ಸಾರಿ ತಮ್ಮ ಸೋಲಿನಲ್ಲಿ ಯಾರ‌್ಯಾರ ಕೈವಾಡ ಇದೆ ಮುಂದೆ ಎಲ್ಲ ಹೇಳುವೆ ಎಂದಿರುವ ಆಡಿಯೋ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಲೋಕಸಭಾ ಚುನಾವಣೆ ಮುಂಚೆಯೇ ಈ ಭಿನ್ನಮತ ಸ್ಪೋಟ ಕಾಂಗ್ರೆಸ್ ಗೆ ತೊಡಕಾಗಲಿದೆ. ಫೆ. 25 ರವಿವಾರ ಗ್ಯಾರಂಟಿಗಳ ಸಭೆ ಕೊಪ್ಪಳ ಶಾಸಕರು ಕರೆದಿದ್ದು ಸಭೆಯಲ್ಲಿ ಕೊಪ್ಪಳ ತಾಲೂಕಿನ ಎಲ್ಲರನ್ನೂ ಆಹ್ವಾನಿಸಿದ್ದಾರೆ. ಅಂದರೆ ಗಂಗಾವತಿ ಕ್ಷೇತ್ರಕ್ಕೊಳಪಡುವ ಇರಕಲ್ಲಗಡ ಹೋಬಳಿಯ 52 ಗ್ರಾಮದ ಕಾಂಗ್ರೆಸ್ ನವರನ್ನು ಸಭೆಗೆ ಆಹ್ವಾನಿಸಿದ್ದಾರೆ. ಆದರೆ ಇದು ಇಕ್ಬಾಲ್ ಅನ್ಸಾರಿಯವರ ಗಮನಕ್ಕೆ ಇಲ್ಲ.
ಈ ಕುರಿತು ಆಡಿಯೋ ಸಂದೇಶ ಕಳಿಸಿರು ಅನ್ಸಾರಿ ಅವರು ರವಿವಾರದ ಈ ಸಭೆಗೆ ಹೋಗದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ತಮ್ಮ ಬೆಂಬಲಿಗರಿಗೆ ಕರೆ ನೀಡಿರುವ ಇಕ್ಬಾಲ್ ಅನ್ಸಾರಿ ಸಭೆ ಕರೆದವರು ಗಂಗಾವತಿಯಲ್ಲಿ ರಡ್ಡಿ ಪಕ್ಷ ಬೆಂಬಲಿಸಿದವರು ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಗಂಗಾವತಿಯಲ್ಲಿ ಭಿನ್ನವಾದ ರಾಜಕೀಯ ನಡೆಯಲಿದೆ. ಅದನ್ನು ನಾನು ಮಾಡಿ ತೋರಿಸಿತ್ತೇನೆ. ಎಲ್ಲರೂ ಸೇರಿ ಮುಸ್ಲಿಂ ಸಮಾಜದ ವ್ಯಕ್ತಿ ಗೆಲ್ಲಬಾರದು ಅಂತ ನನ್ನ ಸೋಲಿಸಿದ್ದಾರೆ. ಅದರಲ್ಲಿ ಯಾರ‌್ಯಾರು ಇದ್ದಾರೆ ಎಂಬುದು ಮುಸ್ಲಿಂ ಸಮಾಜದ ಮನೆಮನೆಗೆ ವಿಷಯ ತಲುಪಿಸುತ್ತೇನೆ ಎಂದು ಹೇಳಿರುವ ಆಡಿಯೋ ಹರಿದಾಡುತ್ತಿದೆ.