
ಕೆಡಿಪಿ ನಾಮನಿರ್ದೇಶನ ಸದಸ್ಯ ರವಿ ಕುರುಗೋಡಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ನಗರದ ಯಾದವ ಸಮಾಜದ ಮುಖಂಡ, ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಜಿಲ್ಲಾ ಪಂಚಾಯತಿ ಕೆಡಿಪಿಗೆ ನಾಮನಿರ್ದೇಶನಗೊಂಡ ನಿಮಿತ್ಯ ರವಿ ಕುರುಗೋಡ ಯಾದವ ಅವರಿಗೆ ಕಾಂಗ್ರೆಸ್ ಮುಖಂಡರು ಸನ್ಮಾನ ಮಾಡಿದರು.
ಜಿಲ್ಲಾ ಪಂಚಾಯತಿಯ ಕೆಡಿಪಿ ಸದಸ್ಯರ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ನೇತೃತ್ವದಲ್ಲಿ ಅಂಬೇಡ್ಕರ್ ಕೃತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಜ್ಯೋತಿ ಗೊಂಡಬಾಳ ಅವರು, ಯುವ ಮುಖಂಡ ರವಿ ಕುರಗೋಡ ಅವರು ಹಿಂದುಳಿದ ಯಾದವ ಸಮುದಾಯಕ್ಕೆ ಸೇರಿದರೂ ಸಹ ಅವರು ಪಕ್ಷದ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಶ್ರಮಿಸಿದ ಕಾರಣಕ್ಕೆ ಸರಕಾರ ಮತ್ತು ಶಾಸಕರು ಗುರುತಿಸಿದ್ದಾರೆ.
ಕಾಂಗ್ರೆಸ್ ಎಲ್ಲರನ್ನೂ ಒಳಗೊಳ್ಳುವ ಪಕ್ಷ ಎಂದು ಸಾಬೀತು ಮಾಡಿದೆ, ಮುಂದೆಯೂ ಸಹ ಕೆಲಸ ಮಾಡುವ ಕಾರ್ಯಕರ್ತರಿಗೆ ಬೆಲೆ ಕೊಡಲಿದೆ ಎಮದರು. ರವಿ ಅವರು ಜಿಲ್ಲೆಯಲ್ಲಿ ಅತ್ಯಂತ ಪ್ರಮುಖ ನಾಮನಿರ್ದೇಶನಗಳಲ್ಲಿ ಒಂದಾಗಿರುವ ಕೆಡಿಪಿಗೆ ಆಯ್ಕೆ ಆಗಿದ್ದು ಸಂತಸ ತಂದಿದೆ. ಅವರು ಪಕ್ಷ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ಸೇವೆಯನ್ನು ನೀಡುವ ಮೂಲಕ ಮಾದರಿ ಸದಸ್ಯರಾಗಿ ರೂಪಗೊಳ್ಳಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ಕುರಗೋಡ, ಆತ್ಮೀಯರು, ಪಕ್ಷದ ಮುಖಂಡರು ಮತ್ತು ಗೆಳೆಯರು ಸೇರಿ ಸನ್ಮಾನ ಮಾಡಿದ್ದು ಖಷಿಯಾಗಿದೆ, ತಮಗಿರುವ ಜ್ಙಾನ ಮತ್ತು ತಿಳುವಳಿಕೆಯಿಂದ ಆಗುವ ಎಲ್ಲಾ ಉತ್ತಮ ಕೆಲಸ ಮಾಡುವ ಮೂಲಕ ಪಕ್ಷಕ್ಕೆ ಗೌರವ ತರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಸ್.ಟಿ. ಘಟಕ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮೈನಾರಿಟಿ ಸೆಲ್ ಜಿಲ್ಲಾಧ್ಯಕ್ಷ ಸಲೀಂ ಅಳವಂಡಿ, ಕಾರ್ಮಿಕ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ್, ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ್, ಮಹಿಳಾ ಘಟಕದ ಕಾರ್ಯದರ್ಶಿ ಅಂಬಿಕಾ ನಾಗರಾಳ, ಮುಖಂಡರುಗಳಾದ ರೂಪಾ ಬಂಗಾರಿ, ಸಂತೋಷ ಬೂದಿಹಾಳ, ರವಿ ಗುಡ್ಡದಮೇಗಳ, ಬೀರಪ್ಪ ಹಳೆಮನಿ, ಮಾರುತಿ ಮಣ್ಣಿನವರ, ಮಹಾಂತೇಶ ದೊಡ್ಡಮನಿ, ಮುದುಕಪ್ಪ ಕೊಪ್ಪಳ, ಶಶಿ ಗುರುವಿನ್ ಇತರರು ಇದ್ದರು.