
ಡ್ರೈವರ್ ಕ್ಲೀನರ್ ಕಾರ್ಮಿಕರ ಸಂಘದಿಂದ
ಗುಂಪು ಮನೆಗಳನ್ನು ನಿರ್ಮಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ಲಾರಿ ಡ್ರೈವರ್ ಕ್ಲೀನರ್ ಹಾಗೂ ವರ್ಕಶಾಪ್ ಕಾರ್ಮಿಕರ ಸಂಘದ ಭೂಮಿಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಿಕೊಡುವಂತೆ ಕೊಪ್ಪಳ ಜಿಲ್ಲಾ ಡ್ರೈವರ್ ಕ್ಲೀನರ್ ಕಾರ್ಮಿಕರ ಸಂಘ ವಸತಿ ಸಚಿವ ಜಮೀರ್ ಅಹ್ಮದ ಖಾನ್ ಅವರಿಗೆ ಮನವಿ ಸಲ್ಲಿಸಿತು.
ಬುಧವಾರ ಹೊಸಪೇಟೆಯಲ್ಲಿ ಮನವಿ ಸಲ್ಲಿಸಿದ ಸಂಘವು ಡ್ರೈವರ್ ಕ್ಲೀನರ್ ಕಾರ್ಮಿಕರು ಬಡವರಿದ್ದು ವಾಸಿಸಲು ಸ್ವಂತ ಮನೆ ಇಲ್ಲದೆ ತೊಂದರೆಯಲ್ಲಿದ್ದಾರೆ. ಸಂಘವು ಚಿಕ್ಕಸಿಂದೋಗಿ ಸೀಮಾದ ಸ.ನಂ.67/1 ರಲ್ಲಿ 6 ಎಕರೆ 24 ಗುಂಟೆ ಜಮೀನು ಖರೀದಿಸಿ 2012 ರಲ್ಲಿ ಭೂಮಿಯನ್ನು ಮಾನ್ಯ ರಾಜ್ಯಪಾಲರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ.
ಆದರೆ ಈವರೆಗೆ ನಮಗೆ ಮನೆ ಕಟ್ಟಿ ಕೊಟ್ಟಿಲ್ಲ. ಬಡ ಅಸಂಘಟಿತ ಕಾರ್ಮಿಕರ ಡ್ರೈವರ್ ಕ್ಲೀನರ್ ಸಂಘದ ಜಮೀನಿನಲ್ಲಿ ಆಶ್ರಯ ಯೋಜನೆಯ ಗುಂಪು ಮನೆಗಳನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷರಾದ ಬಾಬು ಹುಸೇನ, ಉಪಾಧ್ಯಕ್ಷರಾದ ಶಾಮೀದ್ ಅಲಿ, ಪ್ರ.ಕಾ ಮಹಮ್ಮದ ಅಲಿ ಸೌದಾಗರ್, ದಾದಾಪೀರ್, ಜಮಾಲ್, ಗವಿಸಿದ್ದಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.