
ಕೊಪ್ಪಳ ಜಿಲ್ಲಾ ಭೋವಿ ಯುವ ಘಟಕ ಸಮಿತಿ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ನಗರದ ಗಡಿಯಾರ ಕಂಬದ ಹತ್ತಿರ ಇರುವ ನಾಲ್ವಡ್ ಕಾಂಪ್ಲೆಕ್ಸ್ ಬಳಿ ಮೇ 26 ರವಿವಾರ ಸಂಜೆ ಕರ್ನಾಟಕ ರಾಜ್ಯ ಭೋವಿ ಮಹಾಸಭಾ ಬೆಂಗಳೂರು ಯುವ ಘಟಕ ರಾಜ್ಯ ಅಧ್ಯಕ್ಷರಾದ ವೈ ಶಂಕ್ರಣ್ಣ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಯುವ ಘಟಕ ಸಮಿತಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಯುವ ಘಟಕ ಅಧ್ಯಕ್ಷರಾಗಿ ಹುಲಿಗೇಶ್ ಭೋವಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್, ಕೊಪ್ಪಳ ತಾಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ ಹುಲಿಗೇಶ್ ಕುಣಿಕೇರಿ, ನಗರ ಘಟಕ ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರ, ಗಂಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಸೋಮಪ್ಪ ಸಾಯಿ ನಗರ, ಸಂಘಟನೆ ಕಾರ್ಯದರ್ಶಿಯಾಗಿ ಲಕ್ಷ್ಮಣ್ ಭೋವಿ, ಕುಷ್ಟಗಿ ತಾಲೂಕ ಸಂಘಟನೆ ಕಾರ್ಯದರ್ಶಿಯಾಗಿ ಸುರೇಶ್ ಮಾಲಗಿತ್ತಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ರಾಮಣ್ಣ ಅಳವಂಡಿ,ಮಹಾಸಭೆ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಇಂಗಳಗಿ,ರಮೇಶ್ ಶಿರಗುಂಪಿ,ಹನುಮಂತ ಹಾಲವರ್ತಿ,ನಾಗರಾಜ್ ವೀರಪುರ,ಮಹಾಸಭೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮರಿಸ್ವಾಮಿ ಸಿದ್ದಾಪೂರ,ಕನಕಗಿರಿ ತಾಲೂಕಾಧ್ಯಕ್ಷರಾದ ದುರ್ಗದಾಸ್, ಸೇರಿದಂತೆ ಇತರರು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ರಾಮು ಪೂಜಾರ, ಸಮ್ಮುಖದಲ್ಲಿ ಸಭೆ ಜರಗಿತು.