IMG_20250429_115925

ನಗರಸಭೆಯಿಂದ 48 ಲಕ್ಷ ಉಳಿತಾಯ ಬಜೆಟ್
ಕೆರೆಯ ಅಭಿವೃದ್ಧಿ ನನ್ನ ಕನಸು ಅಮ್ಜದ್ ಪಟೇಲ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 29- ತಡವಾಗಿ ಮಂಡಿಸಲಾದ ಕೊಪ್ಪಳ ನಗರಸಭೆ ಬಜೆಟ್ ಕೊನೆಗು ಮಂಡನೆಯಾಗಿದ್ದು , 48 ಲಕ್ಷ ರೂ ಉಳಿತಾಯ ಬಜೆಟ ನ್ನು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಂಡಿಸಿದರು.
ಮಂಗಳವಾರ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಜರುಗಿದ ಬಜೆಟ್ ಮಂಡನಾ ಸಭೆಯಲ್ಲಿ ಮಂಡಿಸಿದರು.
ನಗರಸಭೆಗೆ ವಿವಿಧ ಯೋಜನೆ ಹಾಗೂ ಕರದಿಂದ ಒಟ್ಟು 54,43,61,278 ರೂ ಜಮಾವಾಗಲಿದ್ದು , ವಿವಿಧ ಯೋಜನೆ ಹಾಗೂ ವೇತನ ಸೇರಿದಂತೆ ಒಟ್ಟು 53, 95,13,778 ಕೋಟಿ ಕರ್ಚು ಮಾಡಲಾಗುತ್ತಿದ್ದು 48,47,500 ರೂ ಉಳಿತಾಯ ಬಜೆಟ್ ಮಂಡಿಸಿದರು.
ನಗರದ ಕೆರೆ ಅಭಿವೃದ್ಧಿ , ಚರಂಡಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷ ಪಲ್ಟನ್, ಸದಸ್ಯರಾದ ಮುತ್ತುರಾಜ ಕುಷ್ಟಗಿ , ಗುರುರಾಜ ಹಲಗೇರಿ, ವಿರುಪಾಕ್ಷಿ ಮೋರನಾಳ , ಚೆನ್ನಪ್ಪ ಕೋಟ್ಯಾಳ  ಸೇರಿದಂತೆ ಇತರ ಸದಸ್ಯರು ಹಾಗೂ ಪೌರಾಯುಕ್ತುರಾದ ಗಣಪತಿ ಪಾಟೀಲ್ ಇತರರು ಇದ್ದರು.

 

Leave a Reply

Your email address will not be published. Required fields are marked *

error: Content is protected !!