WhatsApp Image 2024-02-27 at 3.31.48 PM

ಕೊಪ್ಪಳ ಲೋಕಸಭಾ ಟಿಕೇಟ್ ಸಂಗಣ್ಣ ಕರಡಿ ಅವರಿಗೆ ನೀಡಬೇಕು ಹೈಕಮಾಂಡ್ ಗೆ : ಸಿದ್ದು ಮಣ್ಣಿನವರ ಒತ್ತಾಯ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,27- ಸಂಸದ ಸಂಗಣ್ಣ ಕರಡಿ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೇಟ್ ನೀಡಬೇಕೆಂದು ಹೈಕಮಾಂಡ್ ಗೆ ಬಿಜೆಪಿ ಯುವ ಮುಖಂಡ ಸಿದ್ದು ಮಣ್ಣಿನವರು ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಲಿ ಸಂಸದ ಸಂಗಣ್ಣ ಕರಡಿಯವರು ಸರಳ. ಸಜ್ಜನಿಕೆಯ ವ್ಯಕ್ತಿ ಎಲ್ಲಾ ಜನಾಂಗದವರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಉತ್ತಮ ಜನಪ್ರಿಯ ನಾಯಕ ಇವರು 2 ಸಲ ಸಂಸದರಾಗಿ ಕೇಂದ್ರ ಸರಕಾರ ದಿಂದ ಸಾಕಷ್ಟು ಅನುದಾನವನ್ನು ತರುವ ಮೂಲಕ ತಮ್ಮ ವ್ಯಾಪ್ತಿಯಗೆ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿ ಜನಪ್ರಿಯರಾಗಿದ್ದಾರೆ ನಮ್ಮ ಜಿಲ್ಲೆಯಲ್ಲಿ ಗೀಣಗೇರಾ-ಮೈಹಿಬೂಬನಗರ ರೈಲ್ವೆ ಓಡಾಟ. ಬಾನಾಪೂರ ಪ್ಲೇ ಒವರ್ ಕೊಪ್ಪಳ.ಕಿನ್ನಾಳ ಕುಷ್ಟಗಿ. ಅಂಡರ ಪಾಸ್ ರಸ್ತೆ ಹೂಸ ರೈಲ್ವೆ ನಿಲ್ದಾಣ ಹುಬ್ಬಳ್ಳಿ-ಕಾರಟಗಿ ರೈಲ್ವೆ ಓಡಾಟ. ನ್ಯಾಷನಲ್ ಹೈವೇ ಇನ್ನೂ ಹಲವಾರು ಉತ್ತಮ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ.

ಹಾಲಿ ಸಂಸದರಾದ ಸಂಗಣ್ಣ ಕರಡಿಯವರಿಗೆ ಹೈಕಮಾಂಡ್ ಟಿಕೇಟ್ ನೀಡಿದರ ಗೆಲುವು ಖಚಿತ ಸಂಸದರು ಅತಿ ಹೆಚ್ಚು ಕಾಯ೯ಕತ೯ರನ್ನು ಹೊಂದಿದ್ದಾರೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಜನರ ಸಂಪರ್ಕ ಇರುವ ನಾಯಕ. ಮತ್ತೋಮೆ ಕೊಪ್ಪಳ ಲೋಕಸಭಾ ಕ್ಷೇತ್ರ ಬಿಜೆಪಿ ಪಕ್ಷ ಗೆಲುವು ಗ್ಯಾರಂಟಿ ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಲೋಕಸಭೆ ಟಿಕೇಟ್ ನೀಡಬೇಕೆಂದು ಎಂದು ಹೇಳಿದರು .

ಈ ಸಂದರ್ಭದಲ್ಲಿ ಭೀಮೆಶಿ ಕೊಳಜಿ.ಕಲ್ಲಪ್ಪ ಇಳಗೇರ . ರವಿ ಚರಾರಿ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!