
ಕೊಪ್ಪಳ ವಾರ್ತಾ ಇಲಾಖೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಜೂನ್ 27ರಂದು ಆಚರಿಸಲಾಯಿತು.
ಜಿಲ್ಲಾಡಳಿತ ಭವನದಲ್ಲಿರುವ ವಾರ್ತಾ ಇಲಾಖೆಯ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ, ಪೂಜೆ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ, ಪ್ರಥಮ ದರ್ಜೆ ಸಹಾಯಕರಾದ ಭರತ್ ಕುಮಾರ್, ಸ್ವಾಗತಕಾರರು ಹಾಗೂ ಗ್ರಂಥಪಾಲಕರಾದ ಅರುಣಾ ಡಿ ಭೋಗಿ, ಕಚೇರಿ ಸಿಬ್ಬಂದಿಗಳಾದ ಎಂ.ಪಾಂಡುರಂಗ, ತಿಪ್ಪಯ್ಯ ನಾಯ್ಡು, ಆರಿಫ್ ಅಹ್ಮದ್, ಅಪ್ರೆಂಟಿಶಿಪ್ ತರಬೇತುದಾರರಾದ ಲೋಕೇಶ ಬರಗೂರು ಮತ್ತು ಕನಕರಾಯ ನಾಯಕ ಇದ್ದರು.